ಕಲಬುರ್ಗಿ:- ಇಂದು ಜಿಲ್ಲೆಯ ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.
ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಇಂದು ಮಹಾ ಪೂಜೆ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಇನ್ನೂ ಆಳಂದ ತಾಲೂಕಿನ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಶಿವಲಿಂಗ ಪೂಜೆ ಮಾಡಲು ಹಿಂದೂಗಳಿಗೆ ಕಲಬುರಗಿ ಹೈಕೋರ್ಟ್ ಅವಕಾಶ ನೀಡಿದ್ದು, ಶಿವರಾತ್ರಿಯ ದಿನ ಮಧ್ಯಾಹ್ನದ ನಂತರ ಪೂಜೆಗೆ 15 ಜನ ಹಿಂದೂಗಳಿಗೆ ಕಲಬುರಗಿ ಹೈಕೋರ್ಟ್ ಪೀಠ ಅವಕಾಶ ನೀಡಿದೆ. ಇದರ ಜೊತೆಯಲ್ಲಿ ಮುಸ್ಲಿಂ ಸಮುದಾಯದ 15 ಜನರಿಗೂ ಪ್ರಾರ್ಥನೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ. ಆದ್ರೆ, ನ್ಯಾಯಾಲಯಲಕ್ಕೆ ಪೂಜೆ ಸಲ್ಲಿಸುವವರ ಪಟ್ಟಿ ಸಲ್ಲಿಸಿದ ಬಳಿಕವೇ ಅನುಮತಿ ಎಂದು ಷರತ್ತು ಹಾಕಿದೆ.