ಬೆಂಗಳೂರು:- ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ ರೂ 200 ದಂಡ ಹಾಕಲಾಗುತ್ತೆ ಎಂದು ಬೋರ್ಡ್ ಹಾಕಲಾಗಿದೆ. ಈ ಬೋರ್ಡ್ ಕಂಡ ಪಕ್ಷಿ ಪ್ರಿಯರು ಗರಂ ಆಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಪಾರಿವಾಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಎಲ್ಲಿಲ್ಲಿ ಪಾರಿವಾಳಗಳು ಹೆಚ್ಚಾಗಿ ಕಂಡುಬರುತ್ತೋ ಅಲ್ಲಿ ಊಟ ಹಾಕುವವರ ಸಂಖ್ಯೆಯು ಜಾಸ್ತಿಯಾಗಿತ್ತು. ಆದರೆ ಇನ್ಮೆಲೆ ಪಾರಿವಾಳಗಳಿಗೆ ಊಟ ಹಾಕಿದ್ರೆ 200 ದಂಡಹಾಕುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹೇಳ್ತಿದ್ದಾರೆ. ಹೀಗಾಗಿ ಪಾರಿವಾಳಗಳ ಹಾಟ್ ಸ್ಪಾಟ್ಗಳಾದ ರೇಸ್ ಕೋರ್ಸ್ ರೋಡ್, ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕಿ ರಸ್ತೆಗಳಲ್ಲಿ ಹಾಕಲಾಗಿದೆ. ಇನ್ನು ಈ 200 ರೂ ದಂಡ ಹಾಕೋದಿಕ್ಕೆ ಕಾರಣ ಸಧ್ಯ ಪರಿವಾಳಗಳ ಸಂಖ್ಯೆ ಹೆಚ್ಚಾಗಿರುವುದು
ಪರಿವಾಳಗಳ ರೆಕ್ಕೆಗಳಿಂದ ಅಸ್ತಮ ಕೇಸ್ಗಳು ಹೆಚ್ಚಾಗ್ತಿವೆ. ಈ ಬೇಸಿಗೆಯ ಸಮಯದಲ್ಲಿ ಪರಿವಾಳಗಳು ಹೆಚ್ಚಾದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ರೇಸ್ ಕೋರ್ಸ್ ಸರ್ಕಲ್ ನಲ್ಲಿ ಅಭಿವೃದ್ಧಿ ಕೆಲಸ ಶುರು ಆಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿವಾಳಗಳಿವೆ. ದಿನನಿತ್ಯ ಇಲ್ಲಿಗೆ ಪಕ್ಷಿ ಪ್ರಿಯರು ಬಂದು ಅವುಗಳಿಗೆ ನೀರು, ಆಹಾರ ನೀಡ್ತಾರೆ. ಇದ್ರಿಂದ ರೇಸ್ ಕೋರ್ಸ್ ರಸ್ತೆ ಸರ್ಕಲ್ ಸಂಪೂರ್ಣವಾಗಿ ಪಾರಿವಾಳ ಪಿಕ್ಕೆಯಿಂದ ಹಾಳಾಗ್ತಿದೆ. ಇದನ್ನ ತಪ್ಪಿಸಲು ಪಾಲಿಕೆ ಈ ರೀತಿಯಾಗಿ ದಂಡ ಪ್ರಯೋಗಕ್ಕೆ ಮುಂದಾಗಿದೆ
ಮತ್ತೊಂದೆಡೆ ವೈಧ್ಯರು ಪಾರಿವಾಳಗಳಿಂದ ಕೊಂಚ ದೂರ ಇರಿ ಎಂದು ಸಲಹೆ ನೀಡಿದ್ದಾರೆ.