ಬೆಂಗಳೂರು;- ನಗರದಲ್ಲಿ ಈರುಳ್ಳಿ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ನಗರದ ಅನೇಕ ಅಂಗಡಿಗಳಲ್ಲಿ ಬೆಲೆಗಳು ಶೇಕಡಾ 50 ಕ್ಕಿಂತ ಹೆಚ್ಚಿವೆ, ಮಾರಾಟಗಾರರು ಈರುಳ್ಳಿಯನ್ನು ಸಮರ್ಪಕವಾಗಿ ಪೂರೈಸಲು ಸಾಕಷ್ಟು ದಾಸ್ತಾನು ಇಲ್ಲದೆ ಪರದಾಡುತ್ತಿದ್ದಾರೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್ನಲ್ಲಿ ಕಳೆದೆರಡು ವಾರಗಳಿಂದ ನಿರಂತರವಾಗಿ 35 ರಿಂದ 40 ರೂ.ಗಳ ನಡುವೆ ಇದ್ದ ಈರುಳ್ಳಿಯ ಸಗಟು ಬೆಲೆ ಗುರುವಾರದ ವೇಳೆಗೆ ಕೆಜಿಗೆ 65 ರೂಪಾಯಿಗೆ ಹೆಚ್ಚಳವಾಗಿದೆ.
ಒಂದು ವಾರದಿಂದ ಬೆಲೆ ಏರಿಕೆ
ಬೆಂಗಳೂರು ಆಲೂಗೆಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ರವಿಶಂಕರ್ ಬಿ ಮಾತನಾಡಿ, ಈ ವಾರದ ಆರಂಭದಿಂದಲೂ ಬೆಲೆ ಏರಿಕೆಯಾಗುತ್ತಿದೆ ಎಂದು ತಿಳಿಸಿರುವುದಾಗಿ ಡಿಹೆಚ್ ವರದಿ ಮಾಡಿದೆ.
ಕಳೆದ ಎರಡು ವರ್ಷಗಳಿಂದ ಪೂರೈಕೆ ಕುಸಿಯುತ್ತಿದೆಯಾದರೂ, ಈ ಋತುವಿನಲ್ಲಿ ಪರಿಸ್ಥಿತಿ ಸಾಕಷ್ಟು ಕೆಟ್ಟದಾಗಿದೆ” ಎಂದು ರವಿಶಂಕರ್ ಡಿಹೆಚ್ಗೆ ತಿಳಿಸಿದ್ದಾರೆ.
“ಕೆಲವು ವರ್ಷಗಳ ಹಿಂದೆ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಪ್ರತಿದಿನ 500 ರಿಂದ 1,000 ಟ್ರಕ್ಲೋಡ್ಗಳು ದಾಸ್ತಾನು ಸಗಟು ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು ಅದು ಈಗ ಪ್ರತಿದಿನ ಜಿಲ್ಲೆಗಳಿಂದ ಕೇವಲ 100 ಟ್ರಕ್ಲೋಡ್ ಅಥವಾ ಸರಿಸುಮಾರು 1,000 ಟನ್ ತಾಜಾ ಈರುಳ್ಳಿ ಮಾತ್ರ ಪೂರೈಕೆಯಾಗುತ್ತಿದೆ” ಎಂದು ಹೇಳಿದ್ದಾರೆ.