ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ ನಲ್ಲಿ ಜೈಲು ಸೇರಿರುವ 14ನೇ ಆರೋಪಿ ಪ್ರದೋಶ್ ಅಜ್ಜಿ ನಿಧನರಾಗಿದ್ದಾರೆ. ದರ್ಶನ್ ಆಪ್ತ ಗೆಳೆಯನಾಗಿರುವ ಪ್ರದೋಶ್ ಸದ್ಯ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಇದೀಗ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನಿವಾಸದಲ್ಲಿ ಪ್ರದೋಶ್ರ ಅಜ್ಜಿ ನಿಧನರಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವವರ ಹತ್ತಿರದ ಸಂಬಂಧಿಗಳ ಮೂರನೇ ಸಾವು ಇದಾಗಿದೆ. ಈ ಮೊದಲು ಆರೋಪಿಗಳಾದ ಅನು ತಂದೆ ಹಾಗೂ ರಾಘು ತಾಯಿ ನಿಧನರಾಗಿದ್ದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಸ್ಟೂನಿ ಬ್ರೂಕ್ನ ಮಾಲೀಕ ಸಹ ಹೌದು. ಅವರ ಅಜ್ಜಿ ಜುಲೈ 28 ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಪ್ರದೋಶ್ ಅಜ್ಜಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಜ್ಜಿಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಪ್ರದೋಶ್ಗೆ ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.
ರೇಣುಕಾ ಸ್ವಾಮಿ ಕೊಲೆ ನಡೆದ ದಿನ ಪ್ರದೋಶ್ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ನಲ್ಲಿ ಹಾಜರಿದ್ದರು ಎನ್ನಲಾಗಿದ್ದು, ಕೊಲೆ ನಡೆದ ಬಳಿಕ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರು ಎಂಬ ಆರೋಪವಿದೆ. ದರ್ಶನ್ ಇಂದ ಲಕ್ಷಾಂತರ ರೂಪಾಯಿ ಹಣ ಪಡೆದು ಅದನ್ನು ಶವ ವಿಲೇವಾರಿ ಮಾಡಿದ ಹಾಗೂ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಆರೋಪಿಗಳಿಗೆ ನೀಡಿದ್ದು ಇದೇ ಪ್ರದೋಶ್.
ಘಟನೆ ನಡೆದ ದಿನ ಸ್ಟೂನಿ ಬ್ರೂಕ್ ಮಾಲೀಕ ವಿನಯ್, ದರ್ಶನ್ ಅವರು ಪಟ್ಟಣಗೆರೆ ಶೆಡ್ಗೆ ಹೋಗುವ ಸಂದರ್ಭದಲ್ಲಿ ಪ್ರದೋಶ್ ಕೊನೆಯಲ್ಲಿ ಹೋಗಿ ಕಾರು ಹತ್ತಿದ ಎನ್ನಲಾಗುತ್ತಿದೆ. ಅಸಲಿಗೆ ದರ್ಶನ್, ಪ್ರದೋಶ್ನನ್ನು ಬರುವುದು ಬೇಡ ಎಂದೇ ಹೇಳಿದರಂತೆ ಆದರೂ ಸಹ ಬರ್ತೀನಿ ಬಾಸ್ ಎನ್ನುತ್ತಾ ಪ್ರದೋಶ್, ದರ್ಶನ್ ಹಾಗೂ ವಿನಯ್ ಜೊತೆ ಹೋದನಂತೆ. ಅದರಿಂದ ಈಗ ಕೊಲೆ ಪ್ರಕರಣದ ಆರೋಪಿ ಆಗಿದ್ದಾನೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹದಿನೇಳು ಆರೋಪಿಗಳಿದ್ದಾರೆ. ಅವರಲ್ಲಿ ಆರೋಪಿ ಅನು ತಂದೆ ಸಾವನ್ನಪ್ಪಿದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸುವುದಕ್ಕೆ ಮುನ್ನವೇ ಅನು ತಂದೆ ಮಗನ ಸುದ್ದಿ ಕೇಳಿ ಆಘಾತದಿಂದ ಕೊನೆ ಉಸಿರೆಳೆದರು. ಅದಾದ ಬಳಿಕ ಪ್ರಕರಣದ ನಾಲ್ಕನೇ ಆರೋಪಿ ರಾಘು ತಾಯಿ ನಿಧನ ಹೊಂದಿದರು. ರಾಘು, ತಾಯಿಯ ಅಂತಿಮ ದರ್ಶನಕ್ಕೂ ಸಹ ಹೋಗಲಿಲ್ಲ. ಇದೀಗ ಪ್ರದೋಶ್ರ ಅಜ್ಜಿ ಕೊನೆಯುಸಿರೆಳೆದಿದ್ದಾರೆ.