ಭಾರತದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭಗಳು ನಿನ್ನೆಯಿಂದ ಗುಜರಾತ್ನ ಜಾಮ್ನಗರದಲ್ಲಿ ಆರಂಭವಾಗಿದ್ದು, ಅದ್ದೂರಿಯಾಗಿ ನಡೆಯುತ್ತಿವೆ
ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಮದುವೆಗೆ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಮಾರ್ಕ್ ಜುಕರ್ಬರ್ಗ್ ಮತ್ತು ಪ್ರಿಸ್ಸಿಲ್ಲಾ ಚಾನ್ ಅವರಿಗೆ ಜಾಮ್ ನಗರದಲ್ಲಿ ಹಾರ ಹಾಕಿ ಜಾನಪದ ಸಂಗೀತದೊಂದಿಗೆ ಸ್ವಾಗತಿಸಲಾಗಿದೆ. ಅನಂತ್ ಅಂಬಾನಿ ವಿವಾಹ ಪೂರ್ವ ಪಾರ್ಟಿಯಲ್ಲಿ ಜ್ಯೂಕರ್ಬರ್ಗ್ ದಂಪತಿ ಬ್ಲಾಕ್ ಬಣ್ಣದ ಉಡುಗೆಯಲ್ಲಿ ಕ್ಲಾಸಿ ಲುಕ್ನಲ್ಲಿ ಗಮನ ಸೆಳೆದಿದ್ದಾರೆ.
ಪಾರ್ಟಿಗೆ ಪ್ರಿಸ್ಸಿಲ್ಲಾ ಚಾನ್ ಅವರು ಧರಿಸಿದ್ದ ಗೌನ್ ಚಿನ್ನದ ಗುಲಾಬಿಗಳಿಂದ ಕೈಯಿಂದ ಕಸೂತಿ ಮಾಡಲಾಗಿದ್ದು, ಅದರೊಂದಿಗೆ ಕೊಲೊರಾಡೋ ನೀಲಮಣಿ ಕಲ್ಲುಗಳು ಮತ್ತು ಬೆಳ್ಳಿಯ ಸ್ಪಟಿಕ ಅಪ್ಲಿಕ್ಯೂಗಳನ್ನು ಗುಲಾಬಿಗೆ ಅಳವಡಿಸಲಾಗಿದೆ. ಈ ಗೌನ್ ಬೆಲೆಯೂ ಬರೋಬ್ಬರಿ 10,76,664 ರೂ. ಎನ್ನಲಾಗಿದೆ. ಇನ್ನು, ಜ್ಯೂಕರ್ಬರ್ಗ್ ಅವರು ಚಿನ್ನದ ಡ್ರಾಗನ್ಫ್ಲೈಗಳೊಂದಿಗೆ ಕಪ್ಪುಬಣ್ಣದ ಸೂಟ್ ಧರಿಸಿದ್ದು, ಜಾಕೆಟ್ ಚಿನ್ನದ-ಟೋನ್ ರತ್ನದ ಡ್ರಾಗನ್ಸ್ ಅಪ್ಲಿಕ್ಯೂಗಳಿಂದ ಅಲಂಕರಿಸಲಾಗಿದ್ದು, ಭಾರತೀಯ ಕರೆನ್ಸಿಯಲ್ಲಿ ಈ ಸೂಟ್ 6,28,362 ರೂ ಬೆಲೆ ಬಾಳುತ್ತದೆ.