ಬಿಹಾರದ ಬಂಕಾದಲ್ಲಿ ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿ ಸತ್ತ ಹಾವು ಪತ್ತೆಯಾದ ಘಟನೆ ಜರುಗಿದೆ.
ಬಿಹಾರದ ಬಂಕಾದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ರಿಷಿ ಸಿಂಗ್ ಕಾಲೇಜಿನ ಅವ್ಯವಸ್ಥೆಯಿಂದ ಹಿಡಿದು ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದಾನೆ.
ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಊಟದಲ್ಲಿ ಸತ್ತ ಹಾವು ಇತ್ತು ಎಂದು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದಿದ್ದಾನೆ. ಆ ಆಹಾರವನ್ನು ಸೇವಿಸಿದ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದರು ಎಂಬುದಾಗಿ ತಿಳಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಪೋಟೊಗಳನ್ನು ಪೋಸ್ಟ್ ಮಾಡಿದ್ದಾನೆ.
ಹಾಗೇ ಮತ್ತೊಂದು ಪೋಸ್ಟ್ ನಲ್ಲಿ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಬ್ರೆಡ್ನ ಬಗ್ಗೆ ತಿಳಿಸಿದ್ದಾನೆ. ಬ್ರೆಡ್ಗೆ ಅವಧಿ ಮೀರಿದ ಕಾರಣ ಅದರಲ್ಲಿ ಇರುವೆ, ಹುಳುಗಳು ಇವೆ. ಅದನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳ ಆರೋಗ್ಯವನ್ನು ಹಾಳುಮಾಡುತ್ತದೆ ಎಂದು ಅದಕ್ಕೆ ಸಂಬಂಧಪಟ್ಟ ವಿಡಿಯೊ ತುಣುಕೊಂದನ್ನು ಪೋಸ್ಟ್ ಮಾಡಿದ್ದಾನೆ. ಅಲ್ಲದೇ ಇದರ ಕುರಿತು ಕ್ರಮ ತೆಗೆದುಕೊಳ್ಳಲು ಕಾಲೇಜು ಆಡಳಿತ ಮತ್ತು ಸ್ಥಳೀಯ ಪ್ರಾಧಿಕಾರ ಯಾರು ಮುಂದೆ ಬರುತ್ತಿಲ್ಲ ಎಂದು ವಿದ್ಯಾರ್ಥಿಯು ತಿಳಿಸಿದ್ದಾನೆ. ಹಾಗಾಗಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಬಂಕಾಗೆ ಟ್ಯಾಗ್