ಕೆನಡಾ: ಕೆನಡಾದ ಒಟ್ಟಾವಾದಲ್ಲಿ ಮದುವೆ ಆರತಕ್ಷತೆ ಸಮಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ಆ ಸ್ಥಳದಲ್ಲಿ ಎರಡು ಮದುವೆಗಳು ನಡೆಯುತ್ತಿತ್ತು, ಹೊರಗೆ ಬಂದೂಕಿನ ಸದ್ದು ಕೇಳಿ, ಅತಿಥಿಗಳು ಓಡಲು ಆರಂಭಿಸಿದರು. ರಾತ್ರಿ 10:21 ಗಂಟೆಗೆ (ಸ್ಥಳೀಯ ಕಾಲಮಾನ) ಸಂತ್ರಸ್ತರು ಒಟ್ಟಾವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಇನ್ಫಿನಿಟಿ ಕನ್ವೆನ್ಷನ್ ಸೆಂಟರ್ನಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ.
ಗುಂಡಿನ ದಾಳಿಯ ಕೆಲವು ಗಂಟೆಗಳ ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಇಬ್ಬರು ಮೃತರು 26 ವರ್ಷದ ಸೈದ್ ಮೊಹಮ್ಮದ್ ಅಲಿ ಮತ್ತು 29 ವರ್ಷದ ಅಬ್ದಿಶಕುರ್ ಅಬ್ದಿ-ದಾಹಿರ್ — ಟೊರೊಂಟೊ ಮೂಲದವರು. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಆರು ಮಂದಿಗೆ ಪ್ರಾಣಾಪಾಯದಲ್ಲಿಲ್ಲ ಎಂದು ಒಟ್ಟಾವಾ ಪ್ಯಾರಾಮೆಡಿಕ್ ವಕ್ತಾರ ಮಾರ್ಕ್-ಆಂಟೊಯಿನ್ ಡೆಸ್ಚಾಂಪ್ಸ್ ಹೇಳಿದ್ದಾರೆ.
ಗುಂಡಿನ ದಾಳಿ ದ್ವೇಷ ಪ್ರೇರಿತವಾಗಿರಬಹುದು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ತನಿಖೆ ನಡೆಯುತ್ತಿದೆ ಮತ್ತು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು, ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆದಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.