ಯಾದಗಿರಿ :- ನಾರಾಯಣಪುರ ಡ್ಯಾಂ ನೀರಿಗಾಗಿ ಆಗ್ರಹಿಸಿ ಯಾದಗಿರಿ ಬಂದ್ ಗೆ ಕರವೇ ಕರೆ ಕೊಟ್ಟಿದೆ. ಅದರಂತೆ ಇಂದು ಬೆಳ್ಳಂಬೆಳಗ್ಗೆ ಕರವೇ ಕಾರ್ಯಕರ್ತರಿಂದ ಬಂದ್ ಗೆ ಬೆಂಬಲಿಸಿ ಹೋರಾಟ ಮಾಡಲಾಗಿದೆ.
ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಹೋರಾಟ ಮಾಡಲಾಗುತ್ತಿದೆ. ಯಾದಗಿರಿ ನಗರದಲ್ಲಿ ಹೋರಾಟಗಾರರು ಅಂಗಡಿಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿದ್ದಾರ.
ಹೋರಾಟಗಾರರ ಪ್ರತಿಭಟನೆ ಹಿನ್ನೆಲೆ ವಿಧಿಇಲ್ಲದೇ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿದ್ದಾರೆ.
