ಸಕ್ಕರೆ ಕಾಯಿಲೆ ಇರುವವರಿಗೆ ಟೆನ್ಶನ್ ನಲ್ಲಿಯೇ ಜೀವನ ನಡೆಯುತ್ತದೆ. ಯಾವ ಆಹಾರ ತಿನ್ನಬೇಕು, ಬಿಡಬೇಕು ಎನ್ನುವುದೇ ದೊಡ್ಡ ಟೆನ್ಷನ್. ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ ಎನ್ನು ವಂತೆ ಯಾವ ಆಹಾರ ತಿಂದರೆ ಮಧುಮೇಹ ಹೆಚ್ಚಾಗುತ್ತೋ ಎನ್ನುವ ಭಯ.
ಕೆಲವೊಂದು ಆಹಾರಗಳಲ್ಲಿ ನೈಸರ್ಗಿಕವಾದ ಸಕ್ಕರೆ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಇದನ್ನು ತಿಂದ ನಂತರದಲ್ಲಿ ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಯಾಗುತ್ತದೆ. ಇದು ಶುಗರ್ ಕಂಟ್ರೋಲ್ ತಪ್ಪಿ ಹೋಗುವಂತೆ ಮಾಡಬಹುದು. ಹೀಗಾಗಿಯೇ ಸಕ್ಕರೆ ಕಾಯಿಲೆ ಇರುವವರಿಗೆ ಡಾಕ್ಟರ್ ಒಂದು ಡಯಟ್ ಲಿಸ್ಟ್ ಕೊಟ್ಟಿರುತ್ತಾರೆ. ಅದರಂತೆ ಆಹಾರಗಳನ್ನು ತಿನ್ನುವುದು ಬಿಡುವುದು ಇರುತ್ತದೆ…
ಟೊಮೆಟೊ ತಿನ್ನಬೇಕಾ ಅಥವಾ ಬೇಡವಾ?
ಈ ಮಧ್ಯದಲ್ಲಿ ಆಹಾರದ ಸಮತೋಲನ ಪದ್ಧತಿಯಲ್ಲಿ ಟೊಮೆಟೊ ತಿನ್ನಬೇಕಾ ಅಥವಾ ಬೇಡವಾ ಎಂಬ ಆಲೋಚನೆ ಕೂಡ ಮಧುಮೇಹ ಇರುವವರಿಗೆ ಬರಬಹುದು. ನೈಸರ್ಗಿಕವಾದ ಟೊಮೆಟೊ ಹಣ್ಣಿನಿಂದ ಸಕ್ಕರೆ ಕಾಯಿಲೆ ಇರುವವರಿಗೆ ಏನಾದರೂ ತೊಂದರೆ ಆಗುತ್ತಾ ನೋಡೋಣ ಬನ್ನಿ.
ಟೊಮೆಟೊ ಹಣ್ಣು ಇನ್ಸುಲಿನ್ ನಿರ್ವಾಹಕ
- ನಮ್ಮ ಭಾರತೀಯ ಅಡುಗೆ ಪದ್ಧತಿಯಲ್ಲಿ ಯಾವುದೇ ಆಹಾರ ಪದಾರ್ಥವನ್ನು ತಯಾರು ಮಾಡಬೇಕಾದರೆ ಟೊಮೆಟೊ ಬಳಸಿರುತ್ತಾರೆ. ಟೊಮ್ಯಾಟೋ ಇಲ್ಲದೆ ಅಡುಗೆ ತಯಾರಾಗುವುದಿಲ್ಲ ಎಂದೇ ಹೇಳಬಹುದು.
- ಟೊಮೆಟೊ ಒಂದು ವಿಟಮಿನ್ ಸಿ ಹೆಚ್ಚಾಗಿ ಒಳಗೊಂಡಿರುವ ಹಣ್ಣಾಗಿದ್ದು, ಇದರಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕ ಸತ್ವಗಳು ಸಾಕಷ್ಟಿವೆ.
- ಅಷ್ಟೇ ಅಲ್ಲದೆ ಪೊಟ್ಯಾಶಿಯಂ ಮತ್ತು ಲೈಕೋಪಿನ್ ಸಹ ಇರಲಿದ್ದು, ಆಂಟಿ ಆಕ್ಸಿಡೆಂಟ್ ಪ್ರಭಾವದಿಂದ ಹೃದಯದ ಆರೋಗ್ಯ ಮತ್ತು ಪಾರ್ಶ್ವವಾಯು ಸಮಸ್ಯೆ ಸುಧಾರಿಸುತ್ತದೆ. ಸಕ್ಕರೆ ಕಾಯಿಲೆಯ ವಿಚಾರದಲ್ಲಿ ಇದೊಂದು ಅಚ್ಚುಕಟ್ಟಾದ ತರಕಾರಿ ಆಗಿದ್ದು ಇನ್ಸುಲಿನ್ ನಿರ್ವಹಣೆ ಮಾಡುತ್ತದೆ.
ಶುಗರ್ ಲೆವೆಲ್ ಮ್ಯಾನೇಜ್ ಮಾಡುತ್ತದೆ
- ಟೊಮೆಟೊ ಹಣ್ಣುಗಳಲ್ಲಿ ನಾರಿನ ಅಂಶದ ಪ್ರಮಾಣ ಅಪಾರವಾಗಿದ್ದು, ದೀರ್ಘಕಾಲ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ.
- ಜೊತೆಗೆ ರಕ್ತದಲ್ಲಿ ಸಮರ್ಪಕ ಪ್ರಮಾಣದಲ್ಲಿ ಮಾತ್ರ ಸಕ್ಕರೆ ಬಿಡುಗಡೆಯಾಗುವಂತೆ ನೋಡಿಕೊಳ್ಳುವುದರಿಂದ ಮಧುಮೇಹ ಸಮಸ್ಯೆಗೆ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಿಹಿ ಸೂಚ್ಯಂಕವನ್ನು ಕಡಿಮೆ ಹೊಂದಿದ್ದು, ಇದೊಂದು ಮಧುಮೇಹ ಸ್ನೇಹಿ ಆಹಾರ ಎಂದು ಹೇಳಬಹುದು.
ಆಹಾರ ಪದ್ಧತಿಯಲ್ಲಿ ಟೊಮೊಟೊ ಬಳಕೆ ಹೇಗೆ?
- ಹಣ್ಣು ಮತ್ತು ತರಕಾರಿಗಳಲ್ಲಿ ಪೌಷ್ಟಿಕ ಸತ್ವಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಅದರಂತೆ ಟೊಮೆಟೊ ಹಣ್ಣಿನಲ್ಲಿ ಕೂಡ.
- ಇದನ್ನು ನೀವು ಸಾಂಬಾರ್ ಪಲ್ಯ ಇತ್ಯಾದಿಗಳ ಜೊತೆ ಬಳಕೆ ಮಾಡುವುದರ ಜೊತೆಗೆ ಸ್ಯಾಂಡ್ ವಿಚ್, ಸ್ಮೂಥಿ, ಟೊಮ್ಯಾಟೋ ಜ್ಯೂಸ್ ಈ ರೂಪದಲ್ಲೂ ಸಹ ಸೇವಿಸಬಹುದು.
ಟೊಮೆಟೊ ಸ್ಮೂಥಿ ತಯಾರು ಮಾಡುವ ವಿಧಾನ?
ಇದಕ್ಕಾಗಿ ಒಂದು ದೊಡ್ಡ ಟೊಮೇಟೊ ತೆಗೆದುಕೊಳ್ಳಿ. ಅರ್ಧ ಕಪ್ ತುರಿದ ಕ್ಯಾರೆಟ್, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ಇಂಚು ಶುಂಠಿ ಶುಂಠಿ, ಎರಡು ಟೇಬಲ್ ಚಮಚ ನಿಂಬೆಹಣ್ಣಿನ ರಸ ಇವುಗಳನ್ನೆಲ್ಲ ಸೇರಿಸಿ ಮಿಶ್ರಣ ಮಾಡಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು, ಅದಕ್ಕೆ ಸ್ವಲ್ಪ ಉಪ್ಪು ಮತ್ತು ಮೆಣಸು ಹಾಕಿ ಆರೋಗ್ಯಕರವಾಗಿ ಸವಿಯುವುದು.