ಬೆಳಗ್ಗೆ ಎದ್ದಕೂಡಲೇ ನೀರು ಕುಡಿಯವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಿದ್ದರೆ ಅದು ಕಡಿಮೆಯಾಗುತ್ತದೆ ಹಾಗೂ ಕಿಡ್ನಿಯ ಒಟ್ಟಾರೆ ಆರೋಗ್ಯ ಕೂಡ ಸುಧಾರಿಸುತ್ತದೆ.
ದೇಹವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗಾದರೆ ಬೆಳಗ್ಗೆ ಎದ್ದು ನೀರು ಕುಡಿಯುವ ಸರಿಯಾದ ನಿಯಮ ಹಾಗೂ ಪ್ರಮಾಣವೇನು ಎಂಬುದನ್ನು ತಿಳಿದುಕೊಳ್ಳೋಣ.
ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದ ನೈಸರ್ಗಿಕ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
* ನೀವು ಕುಡಿಯುವ ನೀರಿನಿಂದ ಚಯಾಪಚಯ ಕ್ರಿಯೆಯು ವೇಗ ಪಡೆದುಕೊಳ್ಳುತ್ತದೆ. ಇದು ದೇಹವು ಪೋಷಕಾಂಶಗಳನ್ನು ಹೆಚ್ಚೆಚ್ಚು ಸ್ವೀಕರಿಸಲು ಸಹಾಯ ಮಾಡುತ್ತದೆ.
* ಬೆಳಗ್ಗೆ ಎದ್ದ ಕೂಡಲೇ ಸಾಕಷ್ಟು ನೀರು ಕುಡಿದರೆ, ದೇಹದ ಶಕ್ತಿಯ ಮಟ್ಟವು ಸುಧಾರಿಸುತ್ತದೆ ಹಾಗೂ ದಿನವಿಡೀ ಚೈತನ್ಯದಿಂದ ಕೂಡಿರಲು ಇದು ಸಹಾಯ ಮಾಡುತ್ತದೆ.
* ಬೇಸಿಗೆಯ ಸಮಯದಲ್ಲಿ ಬೆಳಗಿನ ಜಾವ ನೀರು ಕುಡಿಯುವುದರಿಂದ ದೇಹದಲ್ಲಿ ತೇವಾಂಶ ಸಂಗ್ರಹವಾಗುತ್ತದೆ ಹಾಗೂ ರಾತ್ರಿಯಿಡೀ ನೀವು ನೀರು ಕುಡಿಯದೇ ಹಾಗೆಯೇ ಮಲಗಿದ್ದ ಅಂತರವನ್ನು ಕಡಿಮೆ ಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹ ಮತ್ತು ಮೆದುಳಿಗೆ ಆಮ್ಲಜನಕದ ಪೂರೈಕೆ ಸುಧಾರಿಸುತ್ತದೆ. ಇದರಿಂದ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ದೇಹವನ್ನು ಡಿಟಾಕ್ಸ್ ಮಾಡಲು ಬೆಳಗ್ಗೆ ನೀರು ಕುಡಿಯುವುದು ಉತ್ತಮ ಅಭ್ಯಾಸವಾಗಿದೆ. ಇದು ಯಕೃತ್ತು ಹಾಗೂ ಮೂತ್ರಪಿಂಡಗಳ ಮೇಲೆ ಒತ್ತಡ ಕಡಿಮೆ ಮಾಡುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದ ನಮ್ಮ ತ್ವಚೆಯು ಕಾಂತಿ ಪಡೆದುಕೊಳ್ಳುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಮೊದಲನೆಯದಾಗಿ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಬ್ರಶ್ ಮಾಡಿ. ಬೆಡ್ ಟೀ ಸೇವಿಸುವ ಅಭ್ಯಾಸ ನಿಮಗಿದ್ದರೆ ಅದಕ್ಕೂ ಮೊದಲು ನೀರು ಕುಡಿಯುವುದನ್ನು ನೀವು ರೂಢಿಸಿಕೊಳ್ಳಬೇಕು. ಬೆಳಗ್ಗೆ ಎದ್ದ ಬಳಿಕ ನೀವು ಕನಿಷ್ಠ ಮೂರರಿಂದ ನಾಲ್ಕು ಗ್ಲಾಸ್ ನೀರು ಕುಡಿಯಬೇಕು. ಒಂದೇ ಬಾರಿಗೆ ಇಷ್ಟು ನೀರು ಕುಡಿಯಲು ಸಾಧ್ಯವಿಲ್ಲವಾದರೆ ಕ್ರಮೇಣವಾಗಿ ಈ ಪ್ರಮಾಣ ಹೆಚ್ಚಿಸುತ್ತಾ ಹೋಗಿ. ಬೆಳಗ್ಗಿನ ಜಾವ ಉಗುರುಬೆಚ್ಚಗಿನ ಅಥವಾ ಬಿಸಿ ನೀರನ್ನು ಕುಡಿಯುವ ಅಭ್ಯಾಸ ನಿಮಗಿದ್ದರೆ ಈ ಅಭ್ಯಾಸವನ್ನು ಎಂದಿಗೂ ನಿಲ್ಲಿಸಬೇಡಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ ಚಯಾಪಚಯದ ವೇಗವನ್ನು ಹೆಚ್ಚಿಸುತ್ತದೆ. ಬಿಸಿ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ನೀರು ಕುಡಿದ ಅರ್ಧ ಗಂಟೆ ಬಳಿಕ ನೀವು ಉಪಹಾರ ಸೇವನೆ ಮಾಡಬಹುದಾಗಿದೆ.