ಕಿಡ್ನಿಗೆ ಯಾವುದೇ ಸಮಸ್ಯೆ ಬರಬಾರದು ಅಂದ್ರೆ ನಿಮ್ಮ ಅಡುಗೆಯಲ್ಲಿ ಈ ಎಣ್ಣೆಯನ್ನು ತಪ್ಪದೇ ಬಳಸಬೇಕು.
ಅವುಗಳಲ್ಲಿ ಮೂತ್ರಪಿಂಡ ಅಥವಾ ಕಿಡ್ನಿಯು ಒಂದು. ಕಿಡ್ನಿಯು ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಕಿಡ್ನಿ ಆರೋಗ್ಯವಾಗಿ ಇಲ್ಲದಿದ್ದರೆ ದೇಹದಲ್ಲಿ ಹಲವಾರು ರೋಗಗಳು ಬರಬಹುದು. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಮೂತ್ರಪಿಂಡದ ಕೆಲಸವು ದೇಹದಿಂದ ಎಲ್ಲಾ ತ್ಯಾಜ್ಯವನ್ನು ಮೂತ್ರದ ಮೂಲಕ ತೆಗೆದುಹಾಕುವುದು. ಅದಕ್ಕಾಗಿಯೇ ಕಿಡ್ನಿಯ ಕೆಲಸವು ಸರಿಯಾಗಿರಬೇಕು. ಒಂದು ವೇಳೆ ಕಿಡ್ನಿ ಕಾರ್ಯದಲ್ಲಿ ವ್ಯತ್ಯಾಸವಾದರೆ, ದೇಹದ ಸಮತೋಲನವೇ ತಪ್ಪುತ್ತದೆ. ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ನಿಯಮಿತ ಜೀವನಶೈಲಿ ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸುವುದು ಬಹಳ ಮುಖ್ಯ. ಅದರಲ್ಲೂ ದಿನನಿತ್ಯದ ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ತುಂಬಾ ಜಾಗರೂಕರಾಗಿರಿ.
ಯಾವ ಎಣ್ಣೆ ಬಳಸಿದರೆ ಒಳ್ಳೆಯದು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಆಲಿವ್ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಆರೋಗ್ಯವನ್ನು ಸುಧಾರಿಸಬಹುದು. ಆಲಿವ್ ಎಣ್ಣೆ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಪರ್ಯಾಪ್ತ ಕೊಬ್ಬುಗಳು ಮತ್ತು ವಿಟಮಿನ್-ಇ ನಂತಹ ಪೋಷಕಾಂಶಗಳು ಆಲಿವ್ ಎಣ್ಣೆಯಲ್ಲಿ ಸಮೃದ್ಧವಾಗಿವೆ. ಇವು ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಆಲಿವ್ ಎಣ್ಣೆಯಲ್ಲಿ ಒಲೀಕ್ ಆಮ್ಲ ಹೇರಳವಾಗಿದೆ. ಇದು ಕಿಡ್ನಿಯಲ್ಲಿನ ಯಾವುದೇ ರೀತಿಯ ಉರಿಯೂತವನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕಾಗಿ, ಆಲಿವ್ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದು ತುಂಬಾ ಒಳ್ಳೆಯದು.