ಬೆಂಗಳೂರು:- ನಗರದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತನಿಖೆಗೂ ಮುನ್ನವೇ ಸರ್ಕಾರ ವಜಾ ಮಾಡಬೇಕು ಅಂದ್ರೆ, 300 kg RDX ದೇಶದ ಒಳಗೆ ಬಂದಿದೆ. ಅದಕ್ಕೆ ಕೇಂದ್ರ ಸರ್ಕಾರ ವಜಾ ಆಗೋದ್ ಬೇಡ್ವಾ?ಎಂದು ಪ್ರಶ್ನಿಸಿದ್ದಾರೆ.
ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಕಠಿಣ ಕ್ರಮ. ಅದಕ್ಕೂ ಮುಂಚೆ ರಾಜೀನಾಮೆ ನೀಡಬೇಕು ಎನ್ನೋದಾದರೆ, ಪುಲ್ವಾಮಾ ಸ್ಫೋಟದ ಕುರಿತು ಎನ್ಐಎ ಪ್ರಕರಣ ದಾಖಲಾಗಿತ್ತು. ಚಾರ್ಜ್ ಶೀಟಲ್ಲಿ 20 ಜನರ ಹೆಸರು ಉಲ್ಲೇಖವಿದೆ. ಇದುವರೆಗೂ ಐದು ಜನರ ಬಿಟ್ಟು 15 ಜನರ ಪತ್ತೆಹಚ್ಚಿಲ್ಲ. ಐದು ವರ್ಷ ಆಯ್ತು ಇದರ ಬಗ್ಗೆ ಚರ್ಚೆ ಬೇಡ್ವಾ? ಎಂದು ಪ್ರಶ್ನಿಸಿದರು.
300kg ಆರ್ಡಿಎಕ್ಸ್ ದೇಶದ ಒಳಗೆ ಬರಲು ಕಾರಣ ಯಾರು? ಅವರನ್ನೇಕೆ ರಾಜೀನಾಮೆ ಕೇಳ್ತಾ ಇಲ್ಲ? ಪ್ರಧಾನ ಮಂತ್ರಿಯ ರಾಜೀನಾಮೆ ಕೇಳಬೇಕು ಅಲ್ವಾ? ಕೊನೆ ಪಕ್ಷ ಗೃಹ ಸಚಿವರದ್ದಾದರೂ ರಾಜೀನಾಮೆ ಕೇಳಬೇಕು ಅಲ್ವಾ? ಸವಾಲು ಹಾಕಿದರು.
ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದಿರುವ ಬಗ್ಗೆಯೂ ಹೋರಾಟ ಮಾಡಲು ಹೇಳಿ. ಅದರ ಬಗ್ಗೆ ಯಾಕ್ ಮಾತಾಡಲ್ಲ? ಎಂದು ಅಬ್ಬರಿಸಿದರು