ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಿನಿಮಾಗಳ ಜೊತೆಗೆ ತಮ್ಮ ಖಾಸಗಿ ವಿಚಾರಗಳ ಮೂಲಕವೂ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಶ್ರದ್ಧಾ ಕಪೂರ್ ಸ್ತ್ರೀ 2 ಸಿನಿಮಾದಲ್ಲಿ ನಟಿಸಿದ್ದು ಸದ್ಯದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ.ಶ್ರದ್ಧಾ ಚಿತ್ರರಂಗದಲ್ಲಿ ಸಹ-ನಿರ್ದೇಶಕನಾಗಿ ಗುರುತಿಸಿಕೊಂಡ ರಾಹುಲ್ ಮೋದಿ ಜೊತೆ ಮಾಡುತ್ತಿದ್ದರು. ಆದರೆ ಈಗ ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ನಡುವೆ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇಬ್ಬರು ಬಹಿರಂಗವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ದೂರ ದೂರವಾಗಿರೋ ಹಿಂಟ್ ಸಿಕ್ಕಿದೆ.
2023ರಲ್ಲಿ ಶ್ರದ್ಧಾ ಕಪೂರ್ ಹಾಗೂ ರಾಹುಲ್ ಮೋದಿ ಅವರು ಬಹಳ ಆಪ್ತವಾಗಿದ್ದರು. ತಮ್ಮಿಬ್ಬರ ಸೆಲ್ಫಿಯನ್ನು ಶ್ರದ್ಧಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿದ ಅಭಿಮಾನಿಗಳಿಗೆ ಎಲ್ಲವೂ ಖಚಿತ ಆಗಿತ್ತು. ಕೆಲವು ಸಂದರ್ಭದಲ್ಲಿ ಶ್ರದ್ಧಾ ಕಪೂರ್ ಅವರು ರಾಹುಲ್ ಮೋದಿ ಜೊತೆ ಕಾಣಿಸಿಕೊಂಡಿದ್ದರು. ಆದರೆ ಈಗ ಅವರ ಸಂಬಂಧದಲ್ಲಿ ಬಿರುಕು ಮೂಡಿದಂತಿದೆ.
ಶ್ರದ್ಧಾ ಹಾಗೂ ರಾಹುಲ್ ಮೋದಿಯವರ ಚಲನವಲನಗಳನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಾರೆ. ಶ್ರದ್ಧಾ ಕಪೂರ್ ಅವರು ಇನ್ಸ್ಟಾಗ್ರಾಮ್ನಲ್ಲಿ ರಾಹುಲ್ ಮೋದಿಯವರನ್ನು ಫಾಲೋ ಮಾಡುತ್ತಿಲ್ಲ. ಅಲ್ಲದೇ, ರಾಹುಲ್ ಮೋದಿಯ ಪ್ರೊಡಕ್ಷನ್ ಹೌಸ್, ಆತ್ಮೀಯರು ಹಾಗೂ ಮುದ್ದಿನ ಶ್ವಾನದ ಪೇಜ್ಗಳನ್ನೂ ಕೂಡ ಶ್ರದ್ಧಾ ಕಪೂರ್ ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಬ್ರೇಕಪ್ ಕಾರಣದಿಂದಲೇ ಅವರು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಸಿನಿಮಾಗಳ ವಿಷಯಕ್ಕೆ ಬಂದರೆ ಶ್ರದ್ಧಾ ಕಪೂರ್ ‘ಸ್ತ್ರೀ 2’ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.ಚಿತ್ರದಲ್ಲಿ ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ, ತಮನ್ನಾ ಭಾಟಿಯಾ ಮುಂತಾದ ಜನಪ್ರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಕ್ರೇಜ್ ಸೃಷ್ಟಿ ಮಾಡಿವೆ. ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.