ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ ಕವನದ ಸಾಲುಗಳು ಶ್ರಾವಣ ಮಾಸದ ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.
ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು
ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.
ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.
ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.
ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.
ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು
ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.
ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.
ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.