ಧಾರವಾಡ : ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಹಿಂಪಡೆಯುವ ಹಾಗೂ ಪಠ್ಯ ಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಮಾಜ ಸುಧಾರಕರ ಕುರಿತಾದ ವಿಷಯಗಳನ್ನು ಕೈ ಬಿಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ರಾಜ್ಯಪಾಲರು ತಿರಸ್ಕರಿಸಲು ಆಗ್ರಹಿಸಿ, ಶ್ರೀ ರಾಮ ಸೇನೆ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುದ ಕಾರ್ಯಕರ್ತರು ರಾಜ್ಯ ಸರ್ಕಾರ ನಡೆ ಖಂಡಿಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಗೋ ಹತ್ಯಾ ನಿಷೇಧಕ್ಕೆ ಸಂಬಂಧ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಜನರ, ಮಠಾಧಿಶರ, ಸಂಘಟನಗಳ ಹೋರಾಟ ಫಲವಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ರೈತರ ಬೆನ್ನೆಲುಬು, ದೇಶದ ಆರ್ಥಿಕ ಸಾಮಾಜಿಕ, ಧಾರ್ಮಿಕ,ಆರೋಗ್ಯ, ಕೃಷಿ ಮುಂತಾದವುಗಳಿಗೆ ಆಧಾರ ಸ್ತಂಭ ಗೋ ಗುರುತಿಸಿಕೊಂಡಿದೆ. ಆದರೆ ಈಗಿನ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿರುವ ಖಂಡನೀಯವಾಗಿದೆ ಎಂದರು.
ಮೋಸದ ಮತಾಂತರ ನಿಷೇಧ ಮಸೂದೆ ವಾಪಸ್ ಇದೂ ಸಹ ಹಿಂದಿನ ಬಿಜೆಪಿ ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿತ್ತು. ಮತಾಂತರ ಮಹಾ ಪಿಡುಗು ದೇಶದ ಸಾಂಸ್ಕೃತಿಕ ಭೌಗೋಳಿಕ, ಜನಸಂಖ್ಯೆ ಮುಂತಾದ ಅಸಮತೋಲನ ಜೊತೆಗೆ ಸಂಘರ್ಷಕ್ಕೂ ಕಾರಣಿಭೂತವಾಗಿದ್ದು, ಅದಕ್ಕೆ ನಾಡಿನ ಎಲ್ಲ ಸಮಾಜ, ಸಮುದಾಯಗಳ, ಸಂವಿಧಾನದ ಆಶಯದಂತೆ ಜಾರಿಗೆ ತಂದ ಮಸೂದೆಯನ್ನು ಪ್ರಸಕ್ತ ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಲು ಯತ್ನಿಸುತ್ತಿದೆ. ಇದರ ಜೊತೆಗೆ ಪಠ್ಯಪುಸ್ತಕದಲ್ಲಿ ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ,ಸಮಾಜ ಸುಧಾರಕರ ಪಠ್ಯ ಕೈಬಿಡುವ ನಿರ್ಧಾರ ದೇಶ ಕ್ಕಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಮಾಡಿದ ಘೋರ ಅವಮಾನವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಈ ಮೂರು ಪ್ರಸ್ತಾವನೆಗೆ ನಮ್ಮ ಪ್ರಬಲ ವಿರೋಧವಿದ್ದು ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ, ಈ ಪ್ರಸ್ತಾವನೆಗಳನ್ನು ತಿರಸ್ಕರಿಸಬೇಕೆಂದು ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಕೆ ಮಾಡಿದರು.