ಇಂಗ್ಲೆಂಡ್ ಆರಂಭಿಕ ಡಾವಿಡ್ ಮಲಾನ್ ಇದೀಗ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಹಾಗೂ ಏಕದಿನ ಸ್ವರೂಪದಲ್ಲಿ ಆರನೇ ಶತಕ ಸಿಡಿಸಿದ್ದರೆ. ಆ ಮೂಲಕ ಶುಭಮನ್ ಗಿಲ್ ಹಾಗೂ ಬಾಬರ್ ಆಝಮ್ ಅವರ ದಾಖಲೆಗಳನ್ನು ಮುರಿದಿದ್ದಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮಂಗಳವಾರ (ಅ.10) ಬಾಂಗ್ಲಾದೇಶ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ 91 ಎಸೆತಗಳಲ್ಲಿಯೇ ಡಾವಿಡ್ ಮಲಾನ್, 12 ಬೌಂಡರಿ ಹಾಗೂ ಎರಡು ಸಿಕ್ಸರ್ಗಳೊಂದಿಗೆ ಶತಕ ಸಿಡಿಸಿದರು. ಅಂದ ಹಾಗೆ ತಮ್ಮ 23 ಇನಿಂಗ್ಸ್ನಲ್ಲಿಯೇ ಅವರು 6ನೇ ಒಡಿಐ ಶತಕ ಸಿಡಿಸಿದರು. ಆ ಮೂಲಕ ಶುಭಮನ್ ಗಿಲ್ ಹಾಗೂ ಬಾಬರ್ ಆಝಮ್ ಅವರ ಶತಕದ ದಾಖಲೆಯನ್ನು ಮುರಿದಿದ್ದಾರೆ. ಪ್ರಸಕ್ತ ವರ್ಷದಲ್ಲಿ ಡಾವಿಡ್ ಮಲಾನ್ ದಾಖಲಿಸಿದ 4ನೇ ಶತಕ ಇದಾಗಿದೆ.
ಏಕದಿನ ಸ್ವರೂಪದಲ್ಲಿ ಅತಿ ವೇಗದ 6ನೇ ಶತಕ ಸಿಡಿಸಿದ ಆಟಗಾರರು
*23 ಇನಿಂಗ್ಸ್ – ಡಾವಿಡ್ ಮಲಾನ್- ಇಂಗ್ಲೆಂಡ್
* 27 ಇನಿಂಗ್ಸ್- ಇಮಾಮ್ ಉಲ್ ಹಕ್ – ಪಾಕಿಸ್ತಾನ
* 29 ಇನಿಂಗ್ಸ್- ಉಪಲ್ ತರಂಗ- ಶ್ರೀಲಂಕಾ
* 32 ಇನಿಂಗ್ಸ್- ಬಾಬರ್ ಆಝಮ್- ಪಾಕಿಸ್ತಾನ
* 34 ಇನಿಂಗ್ಸ್- ಆಶೀಮ್ ಆಮ್ಲಾ- ದಕ್ಷಿಣ ಆಫ್ರಿಕಾ
* 35 ಇನಿಂಗ್ಸ್- ಶುಭಮನ್ ಗಿಲ್- ಭಾರತ