ಬೆಂಗಳೂರು: ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಹಾಗೂ ಸ್ಪರ್ಶಿಸಿದ ಆರೋಪ ಎದುರಿಸುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 8 ರಂದು ಈ ಘಟನೆ ನಡೆದಿತ್ತು ಎಂದು ಮಹಿಳೆ ದೂರು ನೀಡಿದ್ದರು. ಮಹಿಳೆ ದೂರು ನೀಡಿದ ಮರು ದಿನವೇ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತು ಮಾಡಿರುವ ಪೊಲೀಸ್ ಇಲಾಖೆ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದೆ.
ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಹಾಗೂ ಸ್ಪರ್ಶಿಸಿದ ಆರೋಪ ಎದುರಿಸುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 8 ರಂದು ಈ ಘಟನೆ ನಡೆದಿತ್ತು ಎಂದು ಮಹಿಳೆ ದೂರು ನೀಡಿದ್ದರು. ಮಹಿಳೆ ದೂರು ನೀಡಿದ ಮರು ದಿನವೇ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತು ಮಾಡಿರುವ ಪೊಲೀಸ್ ಇಲಾಖೆ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿದೆ.
ಏಪ್ರಿಲ್ 8 ರಂದು ನಡೆದಿದೆ ಎನ್ನಲಾದ ಈ ಪ್ರಕರಣ ಸಂಬಂಧ ಏಪ್ರಿಲ್ 10 ರಂದು ಸಂತ್ರಸ್ತ ಮಹಿಳೆ ಟ್ವೀಟ್ ಮಾಡಿದ್ದರು. ಪೊಲೀಸ್ ಠಾಣೆಯಲ್ಲಿ ತಾವು ಅನುಭವಿಸಿದ ಯಾತನೆ ಹಾಗೂ ತಮಗಾದ ಅಹಿತಕರ ಅನುಭವಗಳನ್ನು ಸರಣಿ ಟ್ವೀಟ್ ಮೂಲಕ ಜನತೆಯಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವ್ಯಾಪಕವಾಗಿ ಚರ್ಚೆಯಾಗಿತ್ತು.
ಏಪ್ರಿಲ್ 8 ರಂದು ಸಂತ್ರಸ್ತ ಮಹಿಳೆಯು ತನ್ನ ಸ್ನೇಹಿತೆಯೊಬ್ಬರ ಪರವಾಗಿ ಹೇಳಿಕೆ ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರೂ ಎಸ್ ಐ ಮಂಜುನಾಥ್ ಆಕೆಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಿಲ್ಲ ಎನ್ನಲಾಗಿದೆ. ಜೊತೆಯಲ್ಲೇ ಆಕೆಯ ದೇಹದ ಭಾಗಗಳನ್ನು ಮುಟ್ಟುವ ಜೊತೆಯಲ್ಲೇ ಅಸಭ್ಯವಾಗಿ ವರ್ತನೆ ಮಾಡಿ ಮರು ದಿನ ಮತ್ತೆ ಬರುವಂತೆ ಹೇಳಿ ಕಳಿಸಿದ್ದ ಎನ್ನಲಾಗಿದೆ. ಈ ಸಂಬಂಧ ಸಂತ್ರಸ್ತ ಮಹಿಳೆ ಏಪ್ರಿಲ್ 11 ರಂದು ಡಿಸಿಪಿ ಅವರನ್ನು ಭೇಟಿ ಮಾಡಿ ಲಿಖಿತ ದೂರು ದಾಖಲು ಮಾಡಿದ್ದಾರೆ. ತಾವು ಟ್ವೀಟ್ ಮಾಡಿದ್ದ ವೇಳೆ ವಿವರಿಸಿದ್ದ ಎಲ್ಲ ಅಂಶಗಳನ್ನೂ ತಮ್ಮ ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.