ಬೀದರ್: ಮುಂದಿನ ಸಿಎಂ ಯಾರಾಗ್ತಾರೆ ಎನ್ನುತ್ತಿದ್ದ ಅನೇಕರಿಗೆ ಸಿದ್ದುನೆ ಮುಂದಿನ ಮುಖ್ಯಮಂತ್ರಿ ಎನ್ನುವುದು ಬಹುತೇಕರಿಗೆ ಖಚಿತವಾಗಿತ್ತು ಆದ್ರೆ ಈಗ ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲೆ ಸಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತ್ತು. ಕಾಂಗ್ರೆಸ್ (Congress) ಹೈಕಮಾಂಡ್ ಸಿದ್ದುವನ್ನು ಸಿಎಂ ಗದ್ದುಗೆಗೆ ಏರಿಸಿದ್ದು ಈ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೈಯಲ್ಲಿ ಕೋಲು ಹಿಡಿದು ಗಡಿ ಜಿಲ್ಲೆ ಬೀದರ್ನಲ್ಲಿ 75 ವರ್ಷದ ಅಜ್ಜ (Old Man) ಸಖತ್ ಸ್ಟೆಪ್ ಹಾಕುವ ಮೂಲಕ ಭರ್ಜರಿ ಡ್ಯಾನ್ಸ್ (Dance) ಮಾಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಜಿದ್ದಾಜಿದ್ದಿ ನಡೆಯುತ್ತಿದ್ದು. ಕೊನೆಗೂ ಸಿದ್ದುವೆ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರಿಂದ ಫುಲ್ ಖುಷಿಯಾದ ಬೀದರ್ ತಾಲೂಕಿನ ಮಲ್ಕಾಪೂರ್ ಗ್ರಾಮದ ಅಪ್ಪಟ ಅಭಿಮಾನಿ ಅಜ್ಜ ಡ್ಯಾನ್ಸ್ ಮಾಡಿ ಸಿದ್ದು ಮೇಲಿನ ಅಭಿಮಾನವನ್ನು ತೊರಿದ್ದಾರೆ.
ಸಿದ್ದರಾಮಯ್ಯ ಸಿಎಂ ಘೋಷಣೆ ಹಿನ್ನೆಲೆ ಕುರುಬ ಸಮುದಾಯದಿಂದ ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಬಂದ ಅಜ್ಜ ಏಕಾಏಕಿ ಸಖತ್ ಸ್ಟೆಪ್ ಹಾಕಿದ್ದಾರೆ. ಬೀದರ್ ನಗರದ ಅಂಬೇಡ್ಕರ್ ವೃತದಲ್ಲಿ 75 ವರ್ಷದ ಅಜ್ಜ ಭರ್ಜರಿ ಡ್ಯಾನ್ಸ್ ಮಾಡುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.