ಬೆಂಗಳೂರು: ಕಾಂಗ್ರೆಸ್ ಪಕ್ಷದ ಗೌರವಾನ್ವಿತ ನಾಯಕಿ ಸೋನಿಯಾ ಗಾಂಧಿಯವರನ್ನುಅಶ್ಲೀಲ ಶಬ್ದಗಳಿಂದ ನಿಂದಿಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basan Gowda Patil Yatnal)ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಬೇಕು, ಇಲ್ಲದೆ ಇದ್ದರೆ ಅವರ ಬೆಂಬಲದಿಂದಲೇ ಯತ್ನಾಳ್ ಅವರು ಇಂತಹ ನೀಚತನದ ಪ್ರದರ್ಶನ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬೇಕಾಗುತ್ತದೆ ಎಂಬುದಾಗಿ (Siddaramaiah) ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸರಣಿ ಟ್ವಿಟ್ ಮಾಡಿರುವಂತ ಅವರು, ಸೋನಿಯಾ ಗಾಂಧಿಯವರ ವಿರುದ್ಧ ಈ ರೀತಿ ಅವಹೇಳನ ಕಾರಿಯಾದ ನಿಂದನೆ, ಚಾರಿತ್ರ್ಯಹನನದ ಪ್ರಯತ್ನ ಇದು ಮೊದಲ ಬಾರಿ ಅಲ್ಲ. ಸಾಕ್ಷಾತ್ ನರೇಂದ್ರ ಮೋದಿ ಅವರೇ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸಿನ ವಿಧವೆ, ಜರ್ಸಿಕೌ, ಬಾರ್ ಡಾನ್ಸರ್ ಎಂದೆಲ್ಲ ಅವಹೇಳನ ಮಾಡಿದ್ದಾರೆ. ಬಹುಷಃ ಇದರ ಪ್ರಚೋದನೆಯಿಂದಲೇ ಯತ್ನಾಳ್ ಅಂತಹವರು ಈ ರೀತಿಯ ನೀಚ ಬುದ್ದಿಯನ್ನು ನಿರ್ಭೀತಿಯಿಂದ ಪ್ರದರ್ಶಿಸುತ್ತಿರುವಂತಿದೆ ಎಂದು ಕಿಡಿಕಾರಿದ್ದಾರೆ.