ಮೈಸೂರು: (Karnataka Assembly Election 2023) ವರುಣಾದಲ್ಲಿ ಪ್ರಚಾರ ಮಾಡಲ್ಲ ಎಂದಿದ್ದ ಸಿದ್ದರಾಮಯ್ಯ(Siddramaiah) ಅವರಿಗೆ ಈಗ ಬಿಜೆಪಿ ರಣತಂತ್ರದಿಂದ ಟೆನ್ಷನ್ ಶುರುವಾಗಿದ್ದು ಇಂದು (ಏ.22) ತವರು ಕ್ಷೇತ್ರ ವರುಣಾಗೆ ಭೇಟಿ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು ವರುಣಾದಲ್ಲಿ ಸ್ಪರ್ಧಿಸುವುದು ಪಕ್ಕಾ ಆದಮೇಲೆ ವಿರೋಧಿಗಳು ವರುಣಾದಲ್ಲಿ ಅವರನ್ನು ಈ ಬಾರಿ ಸೋಲಿಸಲು ತಂತ್ರ-ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ವರುಣಾದಲ್ಲೇ ಕಟ್ಟಿ ಹಾಕಲು ಬಿಜೆಪಿ (BJP) ಮಾಸ್ಟರ್ ಪ್ಲಾನ್ ಮಾಡುತ್ತಿದ್ದು, ವಿ.ಸೋಮಣ್ಣ ಅವರನ್ನು ಪ್ರತಿಸ್ಪರ್ಧಿಯಾಗಿಸಿದೆ. ಅಲ್ಲದೇ ರಾಜ್ಯ ಬಿಜೆಪಿ ಘಟಕ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ (BL Santosh) ಅವರನ್ನು ಕಣಕ್ಕೆ ಇಳಿಸಿದೆ.
ಬೆಳಗ್ಗೆ 10.30ಕ್ಕೆ ಹೆಲಿಕಾಪ್ಟರ್ನಲ್ಲಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸುತ್ತಾರೆ. 11 ಗಂಟೆಯಿಂದ ವರುಣಾ ಕ್ಷೇತ್ರದಲ್ಲಿ ಮತಯಾಚನೆ ಆರಂಭಿಸುತ್ತಾರೆ. 11:00 ಗಂಟೆಗೆ ಕಾರ್ಯ ಗ್ರಾಮ, 12:00 ಗಂಟೆಗೆ ಕಾರೇಪುರ ಗ್ರಾಮ, 12:30ಕ್ಕೆ ಹಾಡ್ಯ, 1:00 ಗಂಟೆಗೆ ಬಾಣೂರು, 1:30ಕ್ಕೆ ಚಿನ್ನಂಬಳ್ಳಿ, 2:00 ಗಂಟೆಗೆ ತಗಡೂರು, 2:30ಕ್ಕೆ ವರಹಳ್ಳಿ, 3:00 ಗಂಟೆಗೆ ಚುಂಚನಹಳ್ಳಿ, 3:30ಕ್ಕೆ ಹನುಮನಪುರ, 4:00ಗಂಟೆಗೆ ದಾಸನೂರು, 4:30ಕ್ಕೆ ಕಾರೆಮೋಳೆ, 5:00ಗಂಟೆಗೆ ತೊರವಳ್ಳಿ, 5:30ಕ್ಕೆ ತೊರವಳ್ಳಿ ಮೋಳೆ ಮತ್ತು ಚಿಕ್ಕಹೊಮ್ಮಾದ ಮೋಳೆ, 6:00ಗಂಟೆಗೆ ಅಂಕುಶರಾಯನ ಪುರ, 6:30ಕ್ಕೆ ಚಿಕ್ಕಹೊಮ್ಮ ಮತ್ತು ದೊಡ್ಡಹೊಮ್ಮ, 7:00ಗಂಟೆಗೆ ಅವತಾಳಪುರ ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬಳಿಕ ಪ್ರಚಾರ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.