ರಾಯಚೂರು: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ (Siddaramaiah) ಜೈಲಿಗೆ ಹೋಗ್ತಾರೆ ಅಂತಾ ನಾನು ಈ ಮೊದಲು ಹೇಳಿದ್ದೆ, ಈಗಲೂ ಹೇಳುತ್ತೇನೆ. ಜಸ್ಟೀಸ್ ಕೆಂಪಣ್ಣ ಕೊಟ್ಟ ವರದಿ ವಿಧಾನಸಭೆಯಲ್ಲಿ ಸಿಎಂ ಓದಿದ್ದಾರೆ. ಕೊನೆ ಸಾಲಿನ ಆದೇಶ ಓದಿದ್ದಾರೆ. ಲೋಕಾಯುಕ್ತ (Lokayukta) ಕ್ಕೆ ಕೊಟ್ಟು ಸಂಪೂರ್ಣ ತನಿಖೆ ಮಾಡಿಸಲಾಗುತ್ತೆ, ಯಾರ್ಯಾರು ನಾಯಕರು ಪ್ರಕರಣದಲ್ಲಿ ಇದ್ದಾರೆ ಅವರ ವಿರುದ್ಧ ಕ್ರಮ ಆಗುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ಕಟೀಲ್, ಸಿದ್ದರಾಮಯ್ಯ ಬಹುಮತ ಸರ್ಕಾರ ಇದ್ದಾಗ ಹಗರಣ ಆಗಿತ್ತು. ತಾವು ಸಿಕ್ಕಿ ಬೀಳುತ್ತೇವೆ ಅಂತ ಲೋಕಾಯುಕ್ತವನ್ನು ಮುಚ್ಚಿಸಿದ್ದರು. ಹಲ್ಲಿಲ್ಲದ ಎಸಿಬಿಯನ್ನ ಹುಟ್ಟುಹಾಕಿದರು. ನ್ಯಾ.ಕೆಂಪಣ್ಣ ವರದಿಯನ್ನು ಮುಚ್ಚಿಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದರು. ಈಗ ಆ ವರದಿ ದಾಖಲಾತಿಗಳನ್ನ ಇಟ್ಟುಕೊಂಡು ತನಿಖೆ ಮಾಡಿಸುತ್ತೇವೆ. ಹಗರಣದಲ್ಲಿದ್ದವರು ಜೈಲಿಗೆ ಹೋಗ್ತಾರೆ ಅಂತ ಕಟೀಲ್ ಹೇಳಿದ್ದಾರೆ.
ಅಮಿತ್ ಶಾ, ಜನಾರ್ದನ ರೆಡ್ಡಿಯನ್ನು ನೋಡಿಕೊಳ್ಳುತ್ತೇನೆ ಎಂಬ ಹೇಳಿಕೆಗೆ ಹೆಚ್.ಡಿ.ಕೆ ಪ್ರತಿಕ್ರಿಯೆ ವಿಚಾರವಾಗಿ ಮಾತನಾಡಿದ ಕಟೀಲ್ (Nalin Kumar Kateel), ಅಮಿತ್ ಶಾ (AmitShah) ಜನಾರ್ದನ ರೆಡ್ಡಿ (Janaradhan Reddy) ಯನ್ನು ನೋಡಿಕೊಳ್ಳುವುದಾಗಿ ಹೇಳಿಲ್ಲ. ನೀವು ತಲೆ ಕೆಡಿಸಿಕೊಳ್ಳುವುದು ಬೇಡ ಅಂತ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.