ಬೆಂಗಳೂರು: ಸಿದ್ದರಾಮಯ್ಯ (Siddaramaiah)ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದ್ದು, ನಾಳೆ ಅಂದರೆ ಮೇ 20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹೀಗಾಗಿ ಸಿಎಂ ಆಯ್ಕೆ ಸರ್ಕಸ್ ಬಳಿಕ ಕೈ ಪಾಳಯದಲ್ಲಿ ಸಚಿವ ಸಂಪುಟ(Siddu Cabinet) ಕಸರತ್ತು ಶುರುವಾಗಿದ್ದು, ಆಯ್ಕೆ ಮಾಡಿರುವ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿರುವ ಹಲವು ಶಾಸಕರು ಇದೀಗ ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ನಾಳೆ ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಕಲಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ 2ನೇ ಬಾರಿಗೆ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ ಇದೆ. ಆದ್ರೆ ಎಷ್ಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದೇ ಕೈ ನಾಯಕರು ಗುಟ್ಟಾಗೇ ಇಟ್ಟಿದ್ದಾರೆ.
ಸಂಪುಟ ಸೇರುವವರು?
- ಡಾ.ಜಿ.ಪರಮೇಶ್ವರ್
- ಕೆ.ಜೆ.ಜಾರ್ಜ್
- ರಾಮಲಿಂಗಾರೆಡ್ಡಿ
- ಎಂ.ಬಿ.ಪಾಟೀಲ್
- ಆರ್.ವಿ.ದೇಶಪಾಂಡೆ
- ಹೆಚ್.ಕೆ.ಪಾಟೀಲ್
- ಶಾಮನೂರು ಶಿವಶಂಕರಪ್ಪ
- ಎಂ.ಕೃಷ್ಣಪ್ಪ
- ಪ್ರಿಯಾಂಕ್ ಖರ್ಗೆ
- ಲಕ್ಷ್ಮಣ್ ಸವದಿ
- ಜಗದೀಶ್ ಶೆಟ್ಟರ್
- ದಿನೇಶ್ ಗುಂಡೂರಾವ್
- ಕೃಷ್ಣಬೈರೇಗೌಡ
- ಹೆಚ್.ಸಿ.ಮಹದೇವಪ್ಪ
- ಸತೀಶ್ ಜಾರಕಿಹೊಳಿ
- ಯು.ಟಿ.ಖಾದರ್
- ಟಿ.ಬಿ.ಜಯಚಂದ್ರ( ಸಚಿವ/ಸ್ಪೀಕರ್)
- ಈಶ್ವರ್ ಖಂಡ್ರೆ
ಆಕಾಂಕ್ಷಿಗಳು ಯಾರ್ಯಾರು?
- ಶರಣಪ್ರಕಾಶ್ ಪಾಟೀಲ್
- ಜಮೀರ್ ಅಹ್ಮದ್
- ಅರಸೀಕೆರೆ ಶಿವಲಿಂಗೇಗೌಡ
- ಲಕ್ಷ್ಮಿ ಹೆಬ್ಬಾಳ್ಕರ್
- ಶಿವರಾಜ್ ತಂಗಡಗಿ
- ಪುಟ್ಟರಂಗಶೆಟ್ಟಿ
- ಅಲ್ಲಮಪ್ರಭು ಪಾಟೀಲ
- ಶರಣಬಸಪ್ಪ ದರ್ಶನಾಪೂರ
- ಬಂಗಾರಪೇಟೆ ನಾರಾಯಣಸ್ವಾಮಿ
- ತನ್ವೀರ್ ಸೇಠ್
- ಸಲೀಂ ಅಹ್ಮದ್
- ನಾಗರಾಜ್ ಯಾದವ್
- ರೂಪಾ ಶಶಿಧರ್
- ಎಸ್.ಆರ್.ಶ್ರೀನಿವಾಸ್
- ಚೆಲುವರಾಯಸ್ವಾಮಿ
- ಎಂ.ಪಿ.ನರೇಂದ್ರ ಸ್ವಾಮಿ
- ಮಾಗಡಿ ಬಾಲಕೃಷ್ಣ
- ರಾಘವೇಂದ್ರ ಹಿಟ್ನಾಳ
- ಬಿ.ನಾಗೇಂದ್ರ
- ಕೆ.ಹೆಚ್.ಮುನಿಯಪ್ಪ
- ಆರ್.ಬಿ.ತಿಮ್ಮಾಪೂರ
- ಶಿವಾನಂದ ಪಾಟೀಲ
- ಎಸ್.ಎಸ್.ಮಲ್ಲಿಕಾರ್ಜುನ್
- ರಹೀಂಖಾನ್
- ಬಸನಗೌಡ ದದ್ದಲ್
- ರುದ್ರಪ್ಪ ಲಮಾಣಿ