ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ ಇರಲಿದೆ.
ನಿರಂತರ ಧಾರಾಕಾರ ಮಳೆಗೆ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಪ್ರವಾಸಿಗರ ಅನುಕೂಲ ದೃಷ್ಟಿಯಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ನ್ನು ಘೋಷಣೆ ಮಾಡಿದೆ.
ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯದೊಂದಿಗೆ ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿಕ್ಕೋಡಿ, ಬೆಳಗಾವಿ, ಗದಗ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ಆನ್ಲೈನ್ ಟಿಕೆಟ್ ಬುಕಿಂಗ್ಗಾಗಿ https://ksrtc.in ಗೆ ಭೇಟಿ ನೀಡಬಹುದಾಗಿದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಹುಬ್ಬಳ್ಳಿ-ಜೋಗ ಫಾಲ್ಸ್ಗೆ 8ಗಂಟೆಗೆ ಐರಾವತ್ ಬಸ್ ಹೊರಡಲಿದ್ದು, (ಹೋಗಿ ಬರುವುದಕ್ಕೆ) 600 ರೂ ಪ್ರಯಾಣ ದರ ನಿಗದಿಸಲಾಗಿದೆ. 7:30 ಗಂಟೆಗೆ ರಾಜಹಂಸ ಬಸ್ ಹೊರಡಲಿದ್ದು (ಹೋಗಿ ಬರುವುದಕ್ಕೆ) 430 ರೂ. ದರ ನಿಗದಿಯಾಗಿದೆ. 8:10ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು (ಹೋಗಿ ಬರುವುದಕ್ಕೆ) 350 ರೂ. ದರವಿದೆ.
ಹಾವೇರಿ ವಿಭಾಗದಿಂದ ಹಾವೇರಿ- ಜೋಗ ಫಾಲ್ಸ್ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 340 ರೂ. ಹಾಗೂ ರಾಣೇಬೆನ್ನೂರು-ಜೋಗ ಫಾಲ್ಸ್ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 320 ರೂ ದರ ನಿಗದಿಸಲಾಗಿದೆ.
ಚಿಕ್ಕೋಡಿ ವಿಭಾಗದಿಂದ ಚಿಕ್ಕೋಡಿ-ಗೋಗಾಕ ಫಾಲ್ಸ್ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 220 ರೂ ಹಾಗೂ ಸಂಕೇಶ್ವರ-ಗೋಗಾಕ ಫಾಲ್ಸ್ಗೆ 9:30ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು, 160 ರೂ ಮತ್ತು ನಿಪ್ಪಾಣಿ- ಗೋಗಾಕ ಫಾಲ್ಸ್ಗೆ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಹೊರಡಲಿದ್ದು, 220 ರೂ ಪ್ರಯಾಣ ದರವಿರಲಿದೆ.
ಬೆಳಗಾವಿ ವಿಭಾಗದಿಂದ ಬೆಳಗಾವಿ-ಗೋಗಾಕ ಫಾಲ್ಸ್ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 190 ರೂ ದರ ನಿಗದಿಸಲಾಗಿದೆ.
ಗದಗ ವಿಭಾಗದಿಂದ ಗದಗ-ಜೋಗ ಫಾಲ್ಸ್ಗೆ 7 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 500 ರೂ ಹಾಗೂ ಗದಗ-ಗೋಕಾಕ ಫಾಲ್ಸ್ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 340 ರೂ. ನಿಗದಿಸಲಾಗಿದೆ.