ಬೆಂಗಳೂರು: ಸೈಲೆಂಟ್ ಸುನೀಲ್ಗೆ (Silent Sunil) ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರಿಂದ ಗಲಾಟೆ ಮಾಡಲಾಗಿದೆ. ಭಾಸ್ಕರ್ ರಾವ್ಗೆ ಟಿಕೆಟ್ ನೀಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಚಾಮರಾಜಪೇಟೆ ಕ್ಷೇತ್ರಕ್ಕೆ ಅನ್ಯಾಯ ಆಗಿದೆ ಅಂತ ಗಲಾಟೆ ಮಾಡಲಾಗಿದೆ. ಒಂದು ಕಾಲದಲ್ಲಿ ರೌಡಿಸಂ ಜಗತ್ತಲ್ಲಿ ಸದ್ದು ಮಾಡಿದ್ದವರು ಇದೀಗ ಏಕಾಏಕಿ ಸಮಾಜ ಸೇವೆ ಮಂತ್ರ ಜಪಿಸಿ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದರು. ಅದರಲ್ಲೂ ಬೆಂಗಳೂರಿನ ರೌಡಿ ಶೀಟರ್ ಸೈಲೆಂಟ್ ಸುನೀಲ ಸೈಲೆಂಟ್ ಆಗಿಯೇ ಪಾಲಿಟಿಕ್ಸ್ಗೆ ಪ್ರವೇಶಿಸಲು ಚಾಮರಾಜಪೇಟೆ ಕ್ಷೇತ್ರದಿಂದ ಕಣಕ್ಕಿಳಿಯ ತಯಾರಿ ನಡೆಸಿದ್ದರು. ಸೈಲೆಂಟ್ ಸುನೀಲ್ ರಾಜಕೀಯಕ್ಕೆ ಬರಲು ತಯಾರಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಸುತ್ತಲು ರೌಡಿಗಳನ್ನು ಹಾಕಿಕೊಂಡು ತಿರುಗುತಿದ್ದವರು ಎಂಎಲ್ಎ, ಎಂಪಿಗಳೊಂದಿಗೆ ತಿರುಗುತ್ತಿದ್ದರು.
ತಾನೊಬ್ಬ ರೌಡಿ ಎನ್ನುವ ಪಟ್ಟ ಹೊಂದಿದ್ದರೆ ಸಮಾಜದಲ್ಲಿ ಕೊನೆಯತನಕವೂ ರೌಡಿಯಾಗಿಯೇ ಇರಬೇಕಾಗುತ್ತದೆ. ಅದರೆ ಅದೇ ರೌಡಿ ಎನ್ನುವ ಹಣೆಪಟ್ಟಿಯ ಬದಲು ರಾಜಕೀಯ ನಾಯಕ ಎಂದು ಬದಲಾದರೆ ಯಾವುದೇ ಆತಂಕ ಇರುವುದಿಲ್ಲ ಎನ್ನುವ ನಿಲುವಿಗೆ ಬಂದಿರುವಂತಿತ್ತು.
ಆದರೆ ಯಾವಾಗ ಸುನೀಲ್ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡರೋ ಅಂದಿನಿಂದ ವಿಪಕ್ಷಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿತ್ತು. ಸೈಲೆಂಟ್ ಸುನೀಲ್ ಪಕ್ಷ ಸೇರುತ್ತಿರುವ ಬಗ್ಗೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ರೌಡಿ ಮೋರ್ಚಾ ತೆರೆಯುವುತ್ತಿದ್ದಾರೆ ಎಂಬಿತ್ಯಾದಿ ಟೀಕೆಗಳನ್ನು ಕಾಂಗ್ರೆಸ್ ನಡೆಸಿತ್ತು.