ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ಬಿಸಿಲ ಝಳಕ್ಕೆ ದಾಖಲೆ ಬರೆದಿದೆ. ಕಳೆದ 41 ವರ್ಷಗಳಲ್ಲಿ ಮೊದಲ ಬಾರಿಗೆ ಈ ವರ್ಷ ಏಪ್ರಿಲ್ ನಲ್ಲಿ ಮಳೆ ಇಲ್ಲ, 1983 ರಲ್ಲಿ ಏಪ್ರಿಲ್ ತಿಂಗಳಲ್ಲಿ ಈ ವರ್ಷದಂತೆ ಮಳೆ ಆಗಿರಲಿಲ್ಲ. ಆದಾದ ಬಳಿಕ ಏಪ್ರಿಲ್ ತಿಂಗಳಲ್ಲಿ ಪ್ರತಿ ವರ್ಷ ಸಿಟಿಯಲ್ಲಿ ಮಳೆಯಾಗುತ್ತಿತ್ತು.
ಸಿಲಿಕಾನ್ ಸಿಟಿಯಲ್ಲಿ ಶೇಕಡಾ ನೂರರಷ್ಟು ಮಳೆ ಕೊರತೆ ಎದುರಾಗಿದ್ದು, ಏಪ್ರಿಲ್ 19 ಮತ್ತು 20 ರಂದು ನಗರದ ಕೆಲವು ಭಾಗಗಳಲ್ಲಿ ಸ್ವಲ್ಪ ತುಂತುರು ಮಳೆಯಾಗಿತ್ತು. ಏಪ್ರಿಲ್ 19 ರಂದು ಸಂಜೆ 5:30 ರವರೆಗೆ ಬೆಂಗಳೂರು ನಗರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು HAL ವಿಮಾನ ನಿಲ್ದಾಣ ಪ್ರದೇಶಗಳಲ್ಲಿ – 0 ಮಿಮೀ ಮಳೆ ದಾಖಲುಲಾಗಿದೆ
ಏಪ್ರಿಲ್ 20 ರಂದು ಬೆಂಗಳೂರು ನಗರದಲ್ಲಿ 0 ಮಿಮೀ ಮಳೆ ದಾಖಳಾಗಿತ್ತು. IMD ಇತರ ಎರಡು ಕೇಂದ್ರಗಳಲ್ಲಿ ಜಾಡಿನ (0.2 ಮಿಮೀಗಿಂತ ಕಡಿಮೆ) ಮಳೆ ದಾಖಲಾಗಿದೆ. ಬೆಂಗಳೂರು ನಗರ ಸೇರಿದಂತೆ 12 ಜಿಲ್ಲೆಗಳು ಹೆಚ್ಚಿನ ಮಳೆಯ ಕೊರತೆ ಎದುರಾಗಿದೆ
ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಸೇರಿ 12 ಜಿಲ್ಲೆಗಳಲ್ಲಿ ಅಂದರೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಮಳೆಯ ಕೊರತೆ ಎದುರಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ