ಬೆಂಗಳೂರು: ಸಿಲಿಕಾನ್ ಸಿಟಿ ಕ್ಯಾನ್ಸರ್ ಹಬ್ ಆಗಿ ಬದಲಾಗುತ್ತಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ.ಕಿದ್ವಾಯಿ ಆಸ್ಪತ್ರೆಯಲ್ಲಿ ದಿನನಿತ್ಯ ಐದಾರು ಮಕ್ಕಳು ದಾಖಲಾಗುತ್ತಿದ್ರು.ತಜ್ಞ ವೈದ್ಯರ ಕೊರತೆ ಕಾಡುತ್ತಿದೆ ಈ ಕುರಿತಾ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.. ಪೀಡಿಯಾಟ್ರಿಕ್ ಆಂಕೊಲಾಜಿ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಕ್ರಮೇಣವಾಗಿ ಹೆಚ್ಚಳವಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲೂ ಕ್ಯಾನ್ಸ್ರ್ ಮಹಾಮಾರಿ ಮಕ್ಕಳನ್ನು ಬಿಟ್ಟು ಬಿಡದೇ ಕಾಡುತ್ತಿದೆ.
ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಆಂಕೊಲಾಜಿ ತಜ್ಞರ ಕೊರತೆಯಿದೆ ಎಂಬುವುದು ಖೇದರದ ಸಂಗತಿಯಾಗಿದ್ದು. ಕ್ಯಾನ್ಸರ್ ಹತೋಟಿಗೆ ಪಡೆಯುವುದು ಹೇಗೆ ಎಂಬ ಆತಂಕ ಮನೆ ಮಾಡಲು ಆರಂಭಿಸಿದೆ.ಇನ್ನೂ ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹೆಚ್ಚಿನ ಮಕ್ಕಳು ಕ್ಯಾನ್ಸರ್ ರೋಗ ಕಾಡುತ್ತಿದ್ದು. 2022-23ರಲ್ಲಿ ರಾಜ್ಯದಲ್ಲಿ 87,000 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಹೆಚ್ಚಾಗಿ 0-14 ವರ್ಷದೊಳಗಿನ ಮಕ್ಕಳಿಗೆ ಕಾನ್ಸರ್ ಭಾದಿಸುತ್ತಿದ್ದು ವೈದ್ಯಲೋಕವನ್ನು ಬೆಚ್ಚಿ ಬೀಳಿಸಿದೆ. ಇನ್ನೂ ಕಿದ್ವಾಯಿ ಆಸ್ಪತ್ರೆಯಲ್ಲಿ ತಜ್ಞ ಪೀಡಿಯಾಟ್ರಿಕ್ ಆಂಕೊಲಾಜಿ ವೈದ್ಯರ ಕೊರತೆ ಕಾಡಲು ಆರಂಭಿಸಿದೆ. ಸದ್ಯ ಕಿದ್ವಾಯಿ ಮಕ್ಕಳ ವಿಭಾಗದಲ್ಲಿ ಮೂರೆ ಮಂದಿ ತಜ್ಞ ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಉಳಿದ ಸಮಯದಲ್ಲಿ ಮಕ್ಕಳ ಆಂಕೊಲಾಜಿಗಳಾಗಿ ಸೂಪರ್ ಸ್ಪೆಷಾಲಿಸ್ಟ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದಾ ಚಿಕಿತ್ಸೆ ನೀಡಲಾಗುತ್ತಿದೆ..
ಒಟ್ನಲಿ ಮಕ್ಕಳಲ್ಲಿ ಒಂದು ಕಡೆ ಕ್ಯಾನ್ಸರ್ ದಿನ ದಿಂದ ದಿನಕ್ಕೆ ಹೆಚ್ಚಾಳ ವಾಗುತಿದ್ದರೆ ಇತ್ತ ಕಿದ್ವಾಯಿ ಇನ್ನು ವೈದ್ಯರ ಕೊರತೆ ನೀಗಿಸಲು ಈ ಯೋಜನೆ ಆರಂಭಿಸಿರೋದು ಸಂತೋಷದ ವಿಚಾರ ಆದ್ರೆ. ನಿಧಾನ ಗತಿಯಲ್ಲಿ ಸಾಗುತ್ತಿರುವ ಯೋಜನೆಯಿಂದಾಗಿ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ವೈದ್ಯರ ಕೊತರೆ ನೀಗಿಸಲು ಸಾದ್ಯ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.