ಸರಳ ಕಥೆಗಳನ್ನು ನೈಜವಾಗಿ ಸೊಗಸಾಗಿ ಸಿನಿಮಾ ರೂಪಕೊಡುವ ನಿರ್ದೇಶಕ ಸಿಂಪಲ್ ಸುನಿ ಈಗ ಮತ್ತೊಂದು ಫ್ರೆಶ್ ಕಥೆ ಒಪ್ಪಿಸೋದಿಕ್ಕೆ ಬರ್ತಿದ್ದಾರೆ. ಈ ಬಾರಿ ಸುನಿ ನವನಾಯಕನ್ನು ಬೆಳ್ಳಿಪರದೆಗೆ ಪರಿಚಯಿಸಲು ಹೊರಟ್ಟಿದ್ದಾರೆ. ರಂಗಭೂಮಿಗೀಳು ಅಂಟಿಸಿಕೊಂಡ ವೀರಾಜ್ ಈಗ ಹೀರೋ ಆಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸುನಿ-ವೀರಾಜ್ ಮೊದಲ ಕೂಸಿಗೆ ಕುವೆಂಪು ಅವರ ಪದ್ಯದ ಸಾಲುಗಳಾದ ದೇವರು ರುಜು ಮಾಡಿದನು ಎಂಬ ಟೈಟಲ್ ಇಡಲಾಗಿದೆ.
ದೇವರು ರುಜು ಮಾಡಿದನು ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ.. ಸಿಂಪಲ್ ಸುನಿ ರಚನ, ವಚನ ಹಾಗೂ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರ್ತಿದೆ. ಕೈಯಲ್ಲಿ ಗಿಟಾರ್ ಹಿಡಿದಿರುವ ವೀರಾಜ್ ರಕ್ತಸಿಕ್ತರಾಗಿ ಕಾಣಿಸಿಕೊಂಡಿದ್ದಾರೆ. ಗ್ರೀನ್ ಹೌಸ್ ಪ್ರೊಡಕ್ಷನ್ ನಡಿ ಗೋವಿಂದ್ ರಾಜ್ ಸಿಟಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ರೈ ಪತಾಜಿ ಕ್ಯಾಮೆರಾ ಹಿಡಿಯಲಿದ್ದು, ಜೆರೆಡ್ ಮತ್ತು ಜುಡಾ ಮ್ಯೂಸಿಕ್ ದೇವರು ರುಜು ಮಾಡಿದನು ಚಿತ್ರಕ್ಕಿದೆ.
ಪುಟ್ಟದೊಂದು ಝಲಕ್ ಮೂಲಕ ಹೀರೋ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ಈಗಾಗಲೇ ನಾಯಕ ವೀರಾಜ್ ಟೀಸರ್ ಶೂಟ್ ಮಾಡಲಾಗಿದೆ. ರಕ್ತಚರಿತ್ರೆ ಜೊತೆಗೆ ಸಂಗೀತದ ಕಥೆಯನ್ನು ದೇವರು ರುಜು ಮಾಡಿದನು ಸಿನಿಮಾ ಮೂಲಕ ಸುನಿ ತೆರೆಯಲ್ಲಿ ಅನಾವರಣ ಮಾಡಲು ಹೊರಟಿದ್ದಾರೆ. ಇದೇ ತಿಂಗಳ 20ರಂದು ಸಿನಿಮಾದ ಮುಹೂರ್ತ ನಡೆಯಲಿದ್ದು, ಮುಹೂರ್ತದ ನಂತರ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.
https://x.com/SimpleSuni/status/1846818310257553723
ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ನಡಿಯಲ್ಲಿ ಬರ್ತಿರುವ ದೇವರು ರುಜು ಮಾಡಿದನು ಸಿನಿಮಾಗೆ ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಜೆಜೆ ಮತ್ತು ಜೇಡ್ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪತಾಜಿ ಛಾಯಾಗ್ರಹಣ, ವಿನಯ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಉತ್ತರ ಕನ್ನಡ, ಗೋವಾ ಸುತ್ತಮುತ್ತ ದೇವರು ರುಜು ಮಾಡಿದನು ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.