ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಅಪ್ರಾಪ್ತ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಪಾಕಿಸ್ತಾನದ ಪಂಜಾಬ್ ನಲ್ಲಿ ನಡೆದಿದೆ.
ಕೂಲಿ ಕಾರ್ಮಿಕನಾದ ಸಜ್ಜದ್ ಖೋಖರ್ ತನ್ನ 42 ವರ್ಷದ ಪತ್ನಿ ಕೌಸರ್ ಮತ್ತು ಏಳು ಮಕ್ಕಳನ್ನು ಕೊಲೆಗೈದಿದ್ದಾನೆ.
10 ವರ್ಷದೊಳಗಿನ ನಾಲ್ವರು ಪುತ್ರಿಯರು ಮತ್ತು ಮೂವರು ಗಂಡು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ, ಎಲ್ಲರನ್ನು ಸ್ಥಳದಲ್ಲೇ ಕೊಂದು ಹಾಕಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಸಜ್ಜದ್ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಆತ ಆಗಾಗ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದನು. ಸದ್ಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪತ್ನಿಯ ಕುಟುಂಬದವರು ಆತನ ಮೇಲೆ ಕೇಸ್ ನೀಡಿದ್ದಾರೆ.
ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನ್ನ ಮಕ್ಕಳಿಗೆ ಇನ್ನು ಮುಂದೆ ಆಹಾರ ನೀಡಲು ಸಾಧ್ಯವಾಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಹತ್ಯೆ ಬಗ್ಗೆ ತಮ್ಮ ಸಂತಾಪ ಸೂಚಿಸಿದ್ದು ಪೊಲೀಸ್ ಮಹಾನಿರೀಕ್ಷಕರಿಂದ ವರದಿಯನ್ನು ಕೇಳಿದ್ದಾರೆ.