ಹರಿಯಾಣ: ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ(Bad mother) ಎಂದೂ ಇರಲಾರಳು ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ತಾಯಿ ಇದಕ್ಕೆ ತದ್ವಿರುದ್ಧವಾಗಿದ್ದಾಳೆ. ಬಹುಶಃ ಈಕೆಯನ್ನೂ ಯಾರೂ ಕೂಡ ಕ್ಷಮಿಸಲಾರರು. ಹರಿಯಾಣದ ದನೋಡಾ ಗ್ರಾಮದಲ್ಲಿ ಪಾಪಿ ತಾಯಿಯೊಬ್ಬಳು ತನ್ನ ಅವಳಿ ಹೆಣ್ಣು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದ ಅಮಾನವೀಯ ಘಟನೆ ನಡೆದಿದೆ. ಶೀತಲ್ ಮಕ್ಕಳನ್ನು ಹತ್ಯೆಗೈದ ತಾಯಿಯಾಗಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿತ ತಾಯಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಪತಿ ನೀಡಿದ ದೂರಿನ ಆಧಾರದ ಮೇಲೆ ಮಹಿಳೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು ಘಟನೆ ನಡೆದ 13 ದಿನಗಳ ಬಳಿಕ ಮಹಿಳೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಕೆಲಸದ ನಿಮಿತ್ತ ಜುಲೈ.12ರಂದು ಹೊಲಕ್ಕೆ ಹೋಗಿದ್ದೆ. ಮಧ್ಯಾಹ್ನ ಮನೆಗೆ ಬಂದಾಗ ಮನೆಯ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜನರು ನಿಂತಿದ್ದರು. ಮನೆಯೊಳಗೆ ಹೋದಾಗ ಅವಳಿ ಮಕ್ಕಳಾದ ಜಾನಕಿ ಮತ್ತು ಜಾನ್ವಿ ಇದ್ದಕ್ಕಿದ್ದಂತೆ ಮೃತಪಟ್ಟಿರುವುದಾಗಿ ಶೀತಲ್ ಹೇಳಿದಳು.
ಆಕೆಯ ಮಾತನ್ನು ನಂಬಿ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸದೆ ಸಮಾಧಿ ಮಾಡಲಾಗಿತ್ತು ಎಂದು ವ್ಯಕ್ತಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಮಹಿಳೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಹೂತಿರುವ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲು ಮುಂದಾಗಿದ್ದಾರೆಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ದಿನಸಿ ಅಂಗಡಿಯಲ್ಲಿ ಮಹಿಳೆಗೆ BSF ಯೋಧನಿಂದ ಲೈಂಗಿಕ ಕಿರುಕುಳ..! ವಿಡಿಯೋ ವೈರಲ್