ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಸಿಂಗಾಪುರವು ಕಳೆದ 20 ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಈ ತಿಂಗಳು ಗಲ್ಲಿಗೇರಿಸಿದೆ. ಸಮಾಜವನ್ನು ರಕ್ಷಿಸಲು ಇಂಥ ಕಠಿಣ ಕಾನೂನು ಅಗತ್ಯ ಎಂದು ಹೇಳುವ ಸಿಂಗಾಪುರ ಇದಕ್ಕಾಗಿ ಸ್ಥಳೀಯ ಜನರಿಂದಲೂ ದೊಡ್ಡ ಮಟ್ಟದ ಬೆಂಬಲವನ್ನು ಪಡೆದುಕೊಂಡಿದೆ. ಸರಿದೇವಿ ಜಮಾನಿ ಅವರ ಗಲ್ಲು ಶಿಕ್ಷೆ ಪ್ರಕರಣ 2022ರ ಮಾರ್ಚ್ 15ರ ಬಳಿಕ ಸಿಂಗಾಪುರದಲ್ಲಿ 15ನೇ ಗಲ್ಲು ಶಿಕ್ಷೆಯಾಗಿದೆ.
2018ರಲ್ಲಿ ಕೇವಲ 30 ಗ್ರಾಮ್ ಹೆರಾಯಿನ್ ಕಳ್ಳಸಾಗನೆ ಮಾಡಿದ್ದ ಕಾರಣಕ್ಕೆ ಸರಿದೇವಿ ಜಮಾನಿ ಬಂಧಿತರಾಗಿ ವಿಚಾರಣೆಗೆ ಒಳಪಟ್ಟಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಸಿಂಗಾಪುರದ ಕಾನೂನಿನ ಪ್ರಕಾರ, 15 ಗ್ರಾಂಗಿಂತ ಹೆಚ್ಚು ಹೆರಾಯಿನ್ ಮತ್ತು 500 ಗ್ರಾಂ ಗಾಂಜಾ ಸಾಗಣೆಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ.
ವಿಚಾರಣೆಯ ಸಮಯದಲ್ಲಿ, ರಂಜಾನ್ ಉಪವಾಸದ ತಿಂಗಳಲ್ಲಿ ವೈಯಕ್ತಿಕ ಬಳಕೆಗಾಗಿ ಹೆರಾಯಿನ್ ಅನ್ನು ಸಂಗ್ರಹಿಸುತ್ತಿದ್ದೆ ಎಂದು ಎಂದು ಸರಿದೇವಿ ಸಾಕ್ಷ್ಯ ಹೇಳಿದ್ದರು. ತನ್ನ ಫ್ಲಾಟ್ನಿಂದ ಹೆರಾಯಿನ್ ಮತ್ತು ಮೆಥಾಂಫೆಟಮೈನ್ನಂತಹ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿರುವುದನ್ನೂ ಆಕೆ ನಿರಾಕರಣೆ ಮಾಡಿರಲಿಲ್ಲ. ಆದರೆ ಆ ಚಟುವಟಿಕೆಗಳ ಪ್ರಮಾಣವನ್ನು ಭಾರೀ ಕಡಿಮೆ ಇತ್ತು ಎಂದು ನ್ಯಾಯಾಧೀಶ ಸೀ ಕೀ ಊನ್ ಎದುರು ಹೇಳಿದ್ದರು.
ಸಿಂಗಾಪುರ ಮೂಲದ ಮಾನವ ಹಕ್ಕುಗಳ ಗುಂಪಿನ ಟ್ರಾನ್ಸ್ಫಾರ್ಮೇಟಿವ್ ಜಸ್ಟೀಸ್ ಕಲೆಕ್ಟಿವ್ ಪ್ರಕಾರ, ಸಿಂಗಾಪುರದಲ್ಲಿ ಮರಣದಂಡನೆಗೆ ಗುರಿಯಾಗಿರುವ ಇಬ್ಬರು ಮಹಿಳೆಯರಲ್ಲಿ ಸರಿದೇವಿ ಒಬ್ಬರು. 2004 ರಲ್ಲಿ ಕೇಶ ವಿನ್ಯಾಸಕಿ ಯೆನ್ ಮೇ ವೋನ್ ಅವರನ್ನು ಮಾದಕವಸ್ತು ಕಳ್ಳಸಾಗಣೆಗಾಗಿ ಗಲ್ಲಿಗೇರಿಸಿದ ನಂತರ, ನಂತರ ಮೊದಲ ಬಾರಿಗೆ ಮರಣದಂಡನೆಗೆ ಒಳಗಾದ ಮೊದಲ ಮಹಿಳೆ ಸರಿದೇವಿ ಆಗಿದ್ದಾರೆ. ಬ್ರಿಟೀಷ್ ಬಿಲಿಯನೇರ್ ಸರ್ ರಿಚರ್ಡ್ ಬ್ರಾನ್ಸನ್ ಸಿಂಗಾಪುರದ ಮರಣದಂಡನೆ ಕಾನೂನಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧ ನಿಯಂತ್ರಿಸಲು ಮರಣದಂಡನೆ ಒಂದೇ ಪರಿಹಾರವಲ್ಲ ಎಂದಿದ್ದಾರೆ.