ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು ಉತ್ತರಾಧಿಕಾರಿ ಲಾರೆನ್ಸ್ ವಾಂಗ್ ಅವರಿಗೆ ಅಧಿಕಾರವನ್ನ ಹಸ್ತಾಂತರಿಸುವುದಾಗಿ ಘೋಷಿಸಿದ್ದಾರೆ.
51 ವರ್ಷದ ವಾಂಗ್ ಪ್ರಸ್ತುತ ಸಿಂಗಾಪುರದ ಉಪ ಪ್ರಧಾನಿ ಮತ್ತು ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಧಾನಿ ಕಚೇರಿಯ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಲೀ ನಾಯಕತ್ವದ ಪರಿವರ್ತನೆಯನ್ನ “ಮಹತ್ವದ ಕ್ಷಣ” ಎಂದಿದ್ದಾರೆ.
“ನಾನು ಮೇ 15, 2024ರಂದು ಪ್ರಧಾನಿ ಹುದ್ದೆಯನ್ನು ತ್ಯಜಿಸುತ್ತೇನೆ ಮತ್ತು ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅದೇ ದಿನ ಮುಂದಿನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಾರೆನ್ಸ್ ಮತ್ತು… ಜನರ ವಿಶ್ವಾಸವನ್ನು ಗಳಿಸಲು ತಂಡವು ಶ್ರಮಿಸಿದೆ, ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ” ಎಂದು ಬರೆದುಕೊಂಡಿದ್ದಾರೆ.