ಪಂಜಾಬಿಯ ಖ್ಯಾತ ಗಾಯಕ ಸಿಧು ಮೂಸೆವಾಲ ಮೃತಪಟ್ಟ ಎರಡು ವರ್ಷಗಳ ಬಳಿಕ ಅವರ ತಾಯಿ ಚರಣ್ ಕೌರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಸಿಧು ಮೂಸೆವಾಲ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಳಿಕ ಚರಣ್ ಕೌರ್ ಮತ್ತೊಮ್ಮೆ ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಕುರಿತು ಸಿಧು ಅವರ ತಂದೆ ಬಲ್ಕೌರ್ ಸಿಂಗ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಮಗುವಿನೊಂದಿಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಶುಭದೀಪ್ನನ್ನು ಪ್ರೀತಿಸುವ ಲಕ್ಷಾಂತರ ಜನರ ಆಶೀರ್ವಾದದಿಂದ ದೇವರು ಶುಭದೀಪ್ ಅವರ ಕಿರಿಯ ಸಹೋದರರನ್ನು ನಮ್ಮ ತೋಳಿಗೆ ಹಾಕಿದ್ದಾನೆ. ವಾಹೆಗುರುಗಳ ಆಶೀರ್ವಾದದಿಂದ ಕುಟುಂಬವು ಆರೋಗ್ಯವಾಗಿದೆ ಎಂದು ಪೋಸ್ಟ್ ಮಾಡುವ ಮೂಲಕ ಮಗುವಿನ ಆಗಮನದ ಸುದ್ದಿಯನ್ನು ತಿಳಿಸಿದ್ದಾರೆ.
ಸಿಧು ತಾಯಿ 58ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ವಿಷಯ ಎಲ್ಲೆಡೆ ಹರಿದಾಡಿತ್ತು. ಈ ಸುದ್ದಿಯನ್ನು ಚರಣ್ ಕೌರ್ ಸ್ಪಷ್ಟಪಡಿಸಿದ್ದರು. ಸಿಧು ಮೂಸೆವಾಲ ಅವರು ತನ್ನ ತಂದೆ ತಾಯಿಗೆ ಒಬ್ಬನೇ ಮಗ ಆಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ತನ್ನ ಮಗನನ್ನು ಕಳೆದುಕೊಂಡು ಅಕ್ಷರಶಃ ದುಖಸಾಗರದಲ್ಲಿ ಮುಳುಗಿದ್ದ ಅವರ ಪೋಷಕರು ಕುಟುಂಬದ ಉತ್ತರಾಧಿಕಾರಿಯ ಸಲುವಾಗಿ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧರಿಸಲು ನಿರ್ಧರಿಸಿದರು. ಇದೀಗ ಮುದ್ದು ಕಂದನ ಆಗಮನದ ಖುಷಿಯಲ್ಲಿ ಸಿಧು ಮೂಸೆವಾಲ ಕುಟುಂಬವಿದೆ.