ಬೆಂಗಳೂರು: ಬನ್ನೇರುಘಟ್ಟದಲ್ಲಿ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆಗೈಯ್ಯಲಾದ ಘಟನೆ ಬೆಳಕಿಗೆ ಬಂದಿದೆ. 53 ವರ್ಷದ ಗೀತಮ್ಮ ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮನೆಯ ಸಮೀಪವೇ ಕೈ ಕಾಲು ರುಂಡ ಕತ್ತರಿಸಿ ಎಸೆಯಲ್ಪಟ್ಟು ನಗ್ನ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಮಹಿಳೆಯ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಉತ್ತರ ಭಾರತ ಮೂಲದ ಮೂರ್ನಾಲ್ಕು ಮಂದಿ ಗೀತಮ್ಮಳ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು.
ಮೂರ್ನಾಲ್ಕು ದಿನಗಳಿಂದ ಬಾಡಿಗೆಗೆ ಇದ್ದ ಯುವಕರು ನಾಪತ್ತೆಯಾಗಿದ್ದು ಇವರೊಂದಿಗೆ ಗೀತಮ್ಮ ಕೂಡಾ ಕಾಣೆಯಾಗಿದ್ದಳು. ಮೇಲ್ನೋಟಕ್ಕೆ ಅವರಿಂದಲೇ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಧಾವಿಸಿ ಪರಿಶೀಲಿಸಿದ್ದಾರೆ.