ಬೆಂಗಳೂರು:- ರಾಜಧಾನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಟ್ಟು ಮಳೆ ಬರ್ತಿದ್ದು ಈ ನಡುವೆ ಮಕ್ಕಳು ಸೇರಿದಂತೆ ವಯಸ್ಕರಲ್ಲಿ ಫಂಗಲ್ ಇನ್ಫಕ್ಷನ್ ಹಾಗೂ ಸ್ಕಿನ್ ಡಿಸೀಜ್ ಶುರುವಾಗಿದೆ. ಸದ್ಯ ಈ ಖಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಾಗಿ ಹರಡುತ್ತಿದೆ.
ಇದು ಮಕ್ಕಳ ಆರೋಗ್ಯದ ಮೇಲೆ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮನೆಯಲ್ಲಿ ಒಂದು ಮಗುವಿಗೆ ಈ ರೀತಿಯ ಖಾಯಿಲೆಗಳು ಕಂಡು ಬಂದ್ರೆ ವೇಗವಾಗಿ ಎಲ್ಲರಿಗೂ ಹರಡುತ್ತಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಮಕ್ಕಳ ಆರೋಗ್ಯ ಬಿಗಡಾಯಿಸುವ ಸಾಧ್ಯತೆ ಇದೆ. ಈ ಫಂಗಲ್ ಇನ್ಫೆಕ್ಷನ್ ಅತಿಯಾಗಿ ಚರ್ಮ ಒದ್ದೆಯಾಗಿರುವುದು, ಹಾಗೂ ಮಳೆಯಲ್ಲಿ ನೆನೆಯುವುದರಿಂದ ಹೆಚ್ಚಾಗಿ ಕಂಡು ಬರ್ತಿದೆ.
ಚರ್ಮದ ಮೇಲಿನ ಅತಿಯಾದ ತೇವಾಂಶವು ಈ ಇನ್ಫೆಕ್ಷನ್ಗೆ ಕಾರಣವಾಗಿದೆ. ಹೀಗಾಗಿ ನೈಮರ್ಲ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದ್ದು ಆಂಟಿಫಂಗಲ್ ಸೋಪು ಅಥವಾ ಹ್ಯಾಂಡ್ವಾಶ್ ಬಳಕೆ, ಮಳೆ ನೀರಿನಲ್ಲಿ ನೆನೆದು ಬಂದ ಮೇಲೆ ಸ್ನಾನ ಮಾಡುವುದು, ಕೈ ಕಾಲು ತೊಳೆಯುವುದನ್ನು ಮರೆಯದಿರಿ. ಚರ್ಮವನ್ನ ಸ್ವಚ್ಛವಾಗಿ ಸಾಧ್ಯವಾದಷ್ಟು ಗಾಯಗಳಾಗದಂತೆ ನೋಡಿಕೊಳ್ಳಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪೋಷಕರು ಮಕ್ಕಳಿಗೆ ಮಳೆಗಾಲ ಮುಗಿಯುವವರೆಗೂ ಕಾದಾರಿಸಿದ ಬಿಸಿ ನೀರು ಕುಡಿಸುವಂತೆ ಪೋಷಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.
ನಗರದ ಬೌರಿಂಗ್, ಕೆ.ಸಿ.ಜನರಲ್ ಆಸ್ಪತ್ರೆ ಸೇರಿದಂತೆ ಅನೇಕ ಕಡೆಗಳಲ್ಲಿ ದಿನಕ್ಕೆ 10 ಮಂದಿಯಲ್ಲಿ 2-3 ಜನರಲ್ಲಿ ಫಂಗಲ್ ಇನ್ಫೆಕ್ಷನ್ ಪ್ರರಕರಣಗಳು ಕಾಣಿಸುತ್ತಿದೆ. ಜೊತೆಗೆ ಜನರು ಬಳಕೆ ಮಾಡುವ ಲೋಷನ್ಗಳು, ಬಾಡಿ ಕ್ರೀಂಗಳ ಬಗ್ಗೆಯೂ ನಿಗಾವಹಿಸಬೇಕಿದೆ. ಹಾಗೂ ಚರ್ಮದಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದ್ರೂ, ಕೂಡಲೇ ವೈದ್ಯರನ್ನ ಸಂಪರ್ಕಿಸಿ ಹಾಗೂ ವೈದ್ಯರು ಹೇಳುವ ಮೆಡಿಸನ್ ಪಡೆಯುವಂತೆ ಸೂಚಿಸುತ್ತಿದ್ದಾರೆ ಇಲ್ಲವಾದ್ರೆ, ಇದ್ರಿಂದ ಮತ್ತಷ್ಟು ಬೇರೆಯ ಚರ್ಮದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.