ನಿದ್ದೆ ಸರಿಯಾಗಿರದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು. ನಿದ್ದೆ ಕಡಿಮೆಯಾದರೆ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು, ಉಸಿರಾಟದ ತೊಂದರೆ ಉಂಟಾಗುವುದು, ರೋಗ ನಿರೋಧಕ ಶಕ್ತಿಯಲ್ಲಿ ವ್ಯತ್ಯಾಸ ಉಂಟಾಗುವುದು. ನಿದ್ದೆ ಕಡಿಮೆಯಾದರೆ ಹೃದಯ ಸಂಬಂಧಿ ಉಂಟಾಗುವುದು ರಕ್ತದೊತ್ತಡ ಹಾಗೂ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು. ಎಚ್ಚರವಾಗಿದ್ದರೆ ಹೃದಯ ಬಡಿತ, ರಕ್ತದೊತ್ತಡ ಅಧಿಕವಾಗುವುದು. ಇದರಿಂದ ಹೃದಯಾಘಾತದ ಅಪಾಯ ಉಂಟಾಗುವುದು. ನಮ್ಮ ದೇಹ ಹಾಗೂ ಮೆದುಳಿನ ಆರೋಗ್ಯಕ್ಕೆ ನಿದ್ದೆ ತುಂಬಾನೇ ಅವಶ್ಯಕವಾಗಿದೆ.
ಮಕ್ಕಳ ಬೆಳವಣಿಗೆಗೆ ನಿದ್ದೆ ತುಂಬಾ ಅವಶ್ಯಕವಾಗಿದೆ. ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುವುದು ಸರಿಯಾಗಿ ನಿದ್ದೆ ಮಾಡದಿದ್ದರೆ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಟೆಸ್ಟೋಸ್ಟಿರೋನೆ, ಈಸ್ಟ್ರೋಜನ್ ಮತ್ತು ಪ್ರೊಗೆಸ್ಟಿರೋನೆ ಇವುಗಳಲ್ಲಿ ವ್ಯತ್ಯಾಸ ಉಂಟಾಗುವುದು. ಇದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುವುದು.
ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು
ಯಾರು ನಿದ್ದೆ ಕಡಿಮೆ ಮಾಡುತ್ತಾರೋ ಅವರ ಮೈ ತೂಕ ಹೆಚ್ಚಾಗಲಿದೆ. ಏಕೆಂದರೆ
ಎಚ್ಚರವಾಗಿರುವುದರಿಂದ ಹಸಿವಾಗುವುದು, ಇದರಿಂದ ತಿನ್ನುವುದು ಹೆಚ್ಚಾಗುವುದು, ಹೀಗಾಗಿ ಮೈ ತೂಕ ಹೆಚ್ಚಾಗುವುದು.
* ದೇಹದಲ್ಲಿ ಹಸಿವನ್ನು ನಿಯಂತ್ರಿಸುವ ಲೆಪ್ಟಿನ್, ಗೆರ್ಲಿನ್ ಹಾರ್ಮೋನ್ಗಳು ಅಧಿಕವಾಗುವುದು
* ದೈಹಿಕ ಚಟುವಟಿಕೆ ಕಡಿಮೆಯಾಗುವುದು
* ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗುವುದು.
ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು
ನಿದ್ದೆ ಸರಿಯಾಗಿ ಮಾಡದಿದ್ದರೆ ಸುಸ್ತು ಹೆಚ್ಚಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬೇಗನೆ ಕಾಯಿಲೆ ಬೀಳುವಿರಿ.