ಕೊಲೆ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿರುವ ದರ್ಶನ್ ಹಾಗೂ ಸಹಚರರಿಗೆ ಅಲ್ಲೂ ರಾಜ ಮರ್ಯಾದೆ ಸಿಗುತ್ತಿದೆ. ಈಗಾಗಲೇ ದರ್ಶನ್ ಎಂಡ್ ಗ್ಯಾಂಗ್ ಗೆ ಬಿರಿಯಾನಿ ತರಿಸಿಕೊಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಪೊಲೀಸರು ಇದೀಗ ದರ್ಶನ್ ಮತ್ತವರ ಸಂಗಡಿಗರಿಗೆ ಪೊಲೀಸ್ ಠಾಣೆಯಲ್ಲಿಯೇ ಸ್ಮೋಕಿಂಗ್ ಝೋಮ್ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಹೈಪ್ರೊಫೈಲ್ ಕೇಸ್ ಆಗಿರುವ ಕಾರಣ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಠಾಣೆಯಲ್ಲಿಯೇ ಸಿಗರೇಟ್ ಸೇದೋಕೆ ಅವಕಾಶ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಶಾಮಿಯಾನ ಹಾಕಿ, ದರ್ಶನ್ಗೆ ಸಿಗರೇಟ್ ಸೇದೋಕೆ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಮಾಧ್ಯಮದವರು ಹಾಗೂ ಅಭಿಮಾನಿಗಳಿಗೆ ಮಾಹಿತಿ ತಿಳಿಯಬಾರದು ಎನ್ನುವ ಕಾರಣಕ್ಕೆ ಸ್ಟೇಷನ್ನ ಹೊರಗಡೆ ಶಾಮಿಯಾನದ ಸೈಡ್ ವಾಲ್ ಅನ್ನು ಕಟ್ಟಲಾಗಿತ್ತು. ಆದರೆ, ಈಗ ಸ್ಟೇಷನ್ನ ಮೊದಲನೇ ಮಹಡಿಯ ಬಾಲ್ಕನಿಯಲ್ಲೂ ಶಾಮಿಯಾನ ಹಾಕಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಠಾಣೆ ಆವರಣಕ್ಕೆ ಶಾಮಿಯಾನ ಹಾಕಿರೋದನ್ನು ಒಪ್ಪಬಹುದು. ಆದ್ರೆ, ಮೊದಲನೇ ಮಹಡಿಯ ಬಾಲ್ಕನಿಗೆ ಶಾಮಿಯಾದ ವಾಲ್ ಹಾಕಿರುವ ಬಗ್ಗೆಯೇ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಇದೆಲ್ಲವನ್ನೂ ನೋಡ್ತಾ ಇದ್ದರೆ, ಆರೋಪಿಗಳ ಪರವಾಗಿ ಪೊಲೀಸರು ಕನಿಕರ ತೋರುತ್ತಿದ್ದಾರೆ ಎನ್ನುವ ಮಾತುಗಳು ಕೇಳುಬರುತ್ತಿದೆ. ವಿಚಾರಣೆ ಎದುರಿಸುತ್ತಾ ಇರುವಂಥ ಆರೋಪಿಯೊಬ್ಬನಿಗೆ ಪೊಲೀಸ್ ಸ್ಟೇಷನ್ನಲ್ಲಿಯೇ ಇಂಥ ವ್ಯವಸ್ಥೆ ಮಾಡಿದ ಬಳಿಕ ಈ ಕೇಸ್ನಲ್ಲಿ ರೇಣುಕಾಸ್ವಾಮಿಗೆ ನ್ಯಾಯ ಸಿಗೋದು ಅನುಮಾನ ಎಂದೂ ಹೇಳಲಾಗ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಗಳ ಪರವಾಗಿ ನಿಂತಿರಬಹುದು ಎನ್ನಲಾಗಿದೆ.
ತನಗೆ ಸಿಕ್ಕಾಪಟ್ಟೆ ಟೆನ್ಶನ್ ಆಗ್ತಿದೆ ಸಿಗರೇಟ್ ಕೊಡಿ ಎಂದು ದರ್ಶನ್ ಪೊಲೀಸರಿಗೆ ದುಂಬಾಲು ಬಿದ್ದಿದ್ದರು. ಆರಂಭದಲ್ಲಿ ಪೊಲೀಸರು ಇದನ್ನೂ ನಿರಾಕರಿಸಿದ್ದರೂ, ಈಗ ಠಾಣೆಯ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಶಾಮಿಯಾನದ ವಾಲ್ ಕ್ರಿಯೇಟ್ ಮಾಡಿರುವುದು ಸಹಜವಾಗಿಯೇ ಸಿಗರೇಟ್ ಜೋನ್ ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಪೊಲೀಸ್ ಕಮೀಷನರ್ ದಯಾನಂದ್ ಅವರ ಸೂಚನೆಯ ಮೇರೆಗೆ ರೇಣುಕಾಸ್ವಾಮಿ ಕೇಸ್ನ ಕೊಲೆಗಡುಕರು ಇರುವ ಠಾಣೆಯ ಆವರಣವನ್ನು ಶಾಮಿಯಾನದಿಂದ ಮುಚ್ಚಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕಿದ್ದ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಿಗಬಾರದು ಎನ್ನುವ ದೃಷ್ಟಿಯಲ್ಲಿ ಶಾಮಿಯಾನದಿಂದ ಮಚ್ಚಲಾಗಿದ.