ಬೆಂಗಳೂರು:- ಹೆಚ್ಚು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದೀರಾ ಎಚ್ಚರ ಎಚ್ಚರ. ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ವಂಚನೆ ಮಾಡ್ತಾರೆ ಹುಷಾರ್..
ಹೌದು, ಹೆಚ್ಚು ಸಾಮಾಜಿಕ ಜಾಲತಾಣ ಬಳಕೆ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ಇರುವುದು ಮುಖ್ಯ. ಸ್ವಲ್ಪ ಯಾಮಾರಿದ್ರೂ ಇದನ್ನೇ ಕಾದು ಕುಳಿತಿರುವ ಹ್ಯಾಕರ್ಸ್ ಗಳು ವಂಚನೆ ಮಾಡಬಹುದು.
ಅದರಂತೆ ಸೀರಿಯಲ್ ನಟ ಸ್ಕಂದ ಅಶೋಕ ಎಂಬುವವರ ಅಕೌಂಟ್ ಹ್ಯಾಕ್ ಮಾಡಿ ವಂಚಕರು ದುರ್ಬಳಕೆ ಮಾಡ್ತಿದ್ದಾರೆ. ಮೈಕೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ದೂರುದಾರರ ಫಾಲೋವರ್ಸ್ ಗಳಿಗೆ ವಂಚಕರು ಮಿಸ್ ಲೀಡ್ ಮಾಡುತ್ತಿದ್ದರು. ಮೆಸೇಜ್ ಮಾಡುವ ಮೂಲಕ ಒಳ್ಳೆಯ ಲಾಭದ ಕೆಲಸ ಎಂದು ಆರೋಪಿಗಳು ಕನ್ವೆನ್ಸ್ ಮಾಡ್ತಿದ್ದರು.
ಹಣದ ಡಿಮ್ಯಾಂಡ್ ಮಾಡುವ ಮೂಲಕ ವಂಚನೆಗೆ ಮುಂದಾಗಿದ್ದರು. ಲಾಗಿನ್ ಲೋಕಷನ್ ಚೆನೈ ಹಾಗೂ ಬೆಂಗಳೂರು ಮತ್ತು ನೈಜೀರಿಯಾ ಎಂದು ಪತ್ತೆಯಾಗಿದೆ. ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಸ್ಕಂದ ಅವರು ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.