ಬಾಗಲಕೋಟೆ : ವಿ. ಸೋಮಣ್ಣ ಸೇರಿದಂತೆ ಯಾವುದೇ ಮುಖಂಡರು ಬಿಜೆಪಿ ಬಿಟ್ಟು ಹೋಗುವದಿಲ್ಲವೆಂಬ ವಿಶ್ವಾಸವಿದೆ. ಇಂತಹ ಯಾವುದೇ ತರಹ ಸುದ್ದಿಗೆ ಮಹತ್ವವಿಲ್ಲವೆಂದ ಮಾಜಿ ಮುಖ್ಯಮಂತ್ರಿ ಬಿಎಸ್ವೈ, ಎಲ್ಲರೂ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ಆತ್ಮೀಯ ಸ್ನೇಹಿತರು. ಯಾವುದೋ ಒಂದೆರಡು ಸಂರ್ಭಗಳಲ್ಲಿ ಅವರು ಹೇಳಿಕೆ ಕೊಟ್ಟಿದ್ದು ಅಪರಾಧವೆಂದು ನಾನು ಪರಿಗಣಿಸಲ್ಲ. ನಮ್ಮಲ್ಲಿ ಎಲ್ಲವೂ ಸರಿಯಿದೆ. ಯಾವುದೇ ಗೊಂದಲವಿಲ್ಲ. ಯತ್ನಾಳ್ ಅವರೂ ಕೂಡ ಸುಧಾರಿಸಿಕೊಂಡಿದ್ದಾರೆ ಎಂದು ಯತ್ನಾಳ್ ಪರ ಸಾಫ್ಟ್ ಆದ ಬಿ.ಎಸ್.ಯಡಿಯೂರಪ್ಪ.
ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ರಾಜ್ಯಕ್ಕೆ ನರೇಂದ್ರ ಮೋದಿಯವರನ್ನ ಉದ್ಘಾಟನೆಗೆ ಕರೆ ತರುತ್ತಾರೆಂಬ ವಿಚಾರ ಶುದ್ಧ ಸುಳ್ಳು. ಎರಡು ಸೇತುವೆಗಳು ಸೇರಿ ಸಣ್ಣ ಪುಟ್ಟ ಕೆಲಸ ನಡೆಯುತ್ತಿದೆ. ಅದನ್ನು ಬಿಟ್ಟರೆ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ವಾಹನಗಳ ಓಡಾಟ ಶುರುವಾಗಿವೆ ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.