ಭಾರತದಲ್ಲಿ ಸೂರ್ಯಗ್ರಹಣ ಗೋಚರ ಅಗಲ್ಲ, ಅದರೆ ಏಷ್ಯಾ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ್ ಸಾಗರ, ಅಮೆರಿಕ, ಸೈಬೇರಿಯಾ, ರಷ್ಯಾ, ಗ್ರೀನ್ಲ್ಯಾಂಡ್, ವೆಸ್ಪರ್ಟ್ ಯುರೋಪ್ನಲ್ಲಿ ಗ್ರಹಣ ಗೋಚರ ಅಗಲಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ಬಹಳ ವಿಶೇಷ ಘಟನೆಗಳೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಪೂಜೆ ಅಥವಾ ಆಹಾರ ಸೇವನೆಯಂತಹ ಯಾವುದೇ ಶುಭ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಯುಗಾದಿಗೂ ಮೊದಲು ಸೂರ್ಯ ಗ್ರಹಣವಿರುವುದರಿಂದ ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆ 30-50 ವರ್ಷಗಳ ಬಳಿಕ ಅರು ರಾಶಿಗಳು ಒಟ್ಟಿಗೆ ಒಂದೇ ಗ್ರಹದಲ್ಲಿ ಸಮ್ಮಿಲನವಾಗಲಿದ್ದು ಇದು ಷಡ್ ಗ್ರಹಯೋಗ ಎನಿಸಿದೆ.
ಇಂದು ವರ್ಷದ ಮೊದಲನೇ ಸೂರ್ಯ ಗ್ರಹಣ: ಯಾವ ಸಮಯದಲ್ಲಿ ಗ್ರಹಣ ಗೋಚರಿಸಲಿದೆ
ಧರ್ಮಗ್ರಂಥಗಳಲ್ಲಿ ಸೂರ್ಯ ಗ್ರಹಣವನ್ನು ಒಂದು ವಿಶೇಷವಾದ ಘಟನೆಯೆಂದು ಪರಿಗಣಿಸಲಾಗುತ್ತದೆ. ಯಾವಾಗ ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬರುತ್ತಾರೋ ಆಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ, ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದು ಸ್ವಲ್ಪ ಸಮಯದವರೆಗೆ ಸೂರ್ಯನ ಬೆಳಕು ಭೂಮಿಯನ್ನು ತಲುಪುವುದನ್ನು ತಡೆಯುತ್ತದೆ.
ಇದರಿಂದಾಗಿ ಭೂಮಿಯ ಕೆಲವು ಭಾಗಗಳಲ್ಲಿ ಕತ್ತಲೆ ಆವರಿಸಿಕೊಳ್ಳುತ್ತದೆ. ಸೂರ್ಯಗ್ರಹಣವು ಜಗತ್ತಿನಲ್ಲಿ ಹೊಸ ಆರಂಭವನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಯುಗಾದಿ ಹಬ್ಬಕ್ಕೂ ಮುನ್ನವೇ ಈ ವರ್ಷದ ಮೊದಲನೇ ಸೂರ್ಯಗ್ರಹಣ ಇಂದು ಸಂಭವಿಸಲಿದೆ. ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈಶಾನ್ಯ ಅಮೆರಿಕ, ಕೆನಡಾದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಒಂದು ಗ್ರಹ ಅಥವಾ ಉಪಗ್ರಹದ ನೆರಳು ಭಾಗಶಃ ಅಥವಾ ಸಂಪೂರ್ಣ ಇನ್ನೊಂದರ ಮೇಲೆ ಬಿದ್ದಾಗ ಗ್ರಹಣವೆಂಬ ವಿದ್ಯಮಾನ ನಡೆಯುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿ ಒಂದು
