ಟೆಲ್ ಅವಿವ್: ಹಮಾಸ್ (Hamas) ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಒತ್ತೆಯಾಳಾಗಿದ್ದ ಸುಮಾರು 250 ಜನರನ್ನು ಶುಕ್ರವಾರ ಇಸ್ರೇಲ್ನ ರಕ್ಷಣಾ ಪಡೆಗಳು (IDF) ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಗಾಝಾ (Gaza) ಭದ್ರತಾ ಬೇಲಿ ಪ್ರದೇಶದ ಬಳಿ 60ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ಕೊಂದು ಒತ್ತೆಯಾಳುಗಳನ್ನು ಹೇಗೆ ರಕ್ಷಿಸಿದರು ಎಂಬುದನ್ನು ತೋರಿಸುವ ಹೆಡ್ಕ್ಯಾಮ್ ದೃಶ್ಯಗಳನ್ನು ಐಡಿಎಫ್ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದೆ.
ಈ ಬಗ್ಗೆ ಬರೆದಿರುವ ಐಡಿಎಫ್, ಫ್ಲೋಟಿಲ್ಲಾ 13 ಎಲೈಟ್ ಘಟಕವನ್ನು ಅಕ್ಟೋಬರ್ 7 ರಂದು ಸುಫಾ ಮಿಲಿಟರಿ ಪೋಸ್ಟ್ನ ನಿಯಂತ್ರಣವನ್ನು ಮರಳಿ ಪಡೆಯುವ ಜಂಟಿ ಪ್ರಯತ್ನದಲ್ಲಿ ಗಾಜಾ ಭದ್ರತಾ ಬೇಲಿಯ ಸುತ್ತಲಿನ ಪ್ರದೇಶಕ್ಕೆ ನಿಯೋಜಿಸಲಾಗಿದೆ.
ಸೈನಿಕರು ಸುಮಾರು 250 ಒತ್ತೆಯಾಳುಗಳನ್ನು ಜೀವಂತವಾಗಿ ರಕ್ಷಿಸಿದ್ದಾರೆ. 60ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಮತ್ತು ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಮುಹಮ್ಮದ್ ಅಬು ಅಲಿ ಸೇರಿದಂತೆ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಐಡಿಎಫ್ ತಿಳಿಸಿದೆ.