ಬೆಂಗಳೂರು: ಇಂದು ಶಾಸಕ ಗೋಪಾಲಯ್ಯ ಅವರ ಮಗನ ಎಂಗೇಜ್ಮೆಂಟ್ ನಲ್ಲಿ ಸೋಮಣ್ಣ-ವಿಜಯೇಂದ್ರ ಮುಖಾಮುಖಿಯಾಗಿ ಭೇಟಿಯಾಗಿದ್ದು ಮಾತುಕತೆ ನಡೆಸಿದ್ದಾರೆ
ಕೆಲ ದಿನಗಳಿಂದ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ವಿ.ಸೋಮಣ್ಣ ಯಾರ ಕೈಗೂ ಸಿಗದೆ ಸ್ವತಂತ್ರರಾಗಿ ಪಕ್ಷ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಮುಂದಿನ ಲೋಕಸಭಾ ಚುನಾವಣೆಗಾಗಿ ಭಾರೀ ಕಸರತ್ತು ನಡೆಸುತ್ತಿದ್ದರು.
ಇಬ್ಬರು ಪರಸ್ಪರ ನಗುನಗುತ್ತಲೇ ಮಾತನಾಡಿದ ನಾಯಕರು ಈ ಬಗ್ಗೆ ವಿಜಯೇಂದ್ರ ಅವರ ಭೇಟಿ ಆಗಿದ್ದರ ಬಗ್ಗೆ ಸೋಮಣ್ಣ ಟ್ವೀಟ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಇದರ ಹಿನ್ನೆಲೆ ನೋಡಿದ್ರೆ ಮತ್ತೆ ವಿಜಯೇಂದ್ರಗೆ ಹತ್ತಿರವಾಗುತ್ತಿರುವ ಸೋಮಣ್ಣ ಎಂದು ಅನಿಸುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವೃಆದ ಸಿ.ಟಿ ರವಿ ಅವರು ಉಪಸ್ಥಿತರಿದ್ದರು.