ಬೆಂಗಳೂರು ;– ಇನ್ನೂ 15 ದಿನದಲ್ಲಿ ಶಕ್ತಿ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಿಳೆಯರು ಶಕ್ತಿ ಯೋಜನೆಯಡಿ ಒಂದೇ ಬಾರಿ ತೆರಳುವುದು ಬೇಡ. ಇದರಿಂದ ಇತರ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ. ಈ ಸಂಬಂಧ 15 ದಿನ ನೋಡಿ, ಬಳಿಕ ಕೆಲವು ಬದಲಾವಣೆ ಮಾಡುತ್ತೇವೆ ಎಂದರು.
ಜೂನ್ 11 ರಂದು 5 ಲಕ್ಷ 70 ಸಾವಿರ ಜನ ಓಡಾಡಿದ್ರು. ನಂತರ 40 ಲಕ್ಷ ಜನ, ಆಮೇಲೆ 3 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆದರೆ ಒಮ್ಮೆಲೆ ಹೋಗೋದು ಬೇಡ ಅಂತ ಮಹಿಳಾ ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ದೇವಸ್ಥಾನಕ್ಕೆ ಹೋಗಲು ಒಂದೇ ಸಲ ತೆರಳಿ ಬಸ್ ರಷ್ ಹೆಚ್ಚಾಗಿದೆ. ಈ ಕಾರ್ಯಕ್ರಮ ಐದು ವರ್ಷ ಇರಲಿದೆ. ಒಂದೇ ಬಾರಿಗೆ ಹೋಗಬೇಡಿ. ಆತಂಕಪಡುವ ಅಗತ್ಯ ಇಲ್ಲ. ಮತ್ತೆ ಚುನಾವಣೆ ನಡೆದ ಬಳಿಕ ಇನ್ನೂ 10 ವರ್ಷ ಕಾರ್ಯಕ್ರಮ ಇರಲಿದೆ. ಕೆಲ ಬಿಜೆಪಿ ನಾಯಕರು ಪ್ರಚೋದನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇರಲಿದೆ. ಒಂದೇ ದಿನದ ಬದಲಾಗಿ ಬೇರೆ ಬೇರೆ ದಿನ ಪ್ರಯಾಣ ಮಾಡಿ. ಹೆಚ್ಚು ಒತ್ತಡ ಇರಬಾರದು. ಇದರಿಂದ ವಿದ್ಯಾರ್ಥಿಗಳು, ಇತರರಿಗೆ ಸಮಸ್ಯೆ ಆಗುತ್ತದೆ ಎಂದು ಮನವಿ ಮಾಡಿದರು.
ಉಚಿತ ಟಿಕೆಟ್ ಪ್ರಯಾಣವಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಾರಂಭದಲ್ಲಿ ಈ ರೀತಿಯ ರಷ್ ಇರುತ್ತೆ. ಒಂದೇ ದಿನ ಧರ್ಮ ಕ್ಷೇತ್ರಕ್ಕೆ ಹೋಗ್ತಾರೆ. ಪ್ರತಿದಿನ ಹೋಗಲ್ಲ. ಪ್ರಾರಂಭದಲ್ಲಿ ಉತ್ಸಾಹದಿಂದ ಹೆಚ್ಚು ಪ್ರಯಾಣ ಮಾಡಿದ್ದಾರೆ. ಇನ್ಮೇಲೆ ಆರು ತಿಂಗಳ ನಂತರ ಪ್ರಯಾಣ ಮಾಡ್ತಾರೆ. ಜನರಿಗೆ ಬೇರೆ ಪ್ರಯಾಣಕರಿಗೆ ತೊಂದರೆ ಆಗಬಾರದು. ಎಷ್ಟು ಬಸ್ ಇದೆಯೋ ಅಷ್ಟೇ ಬಸ್ ಹೋಗ್ತಿದೆ ಎಂದರು.