ತಮಿಳು ನಟ ಇಳಯ ದಳಪತಿ ವಿಜಯ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಬಿಗಿಲ್ ಸಾಕಷ್ಟು ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಬಿಗಿಲ್ ಚಿತ್ರದ ಪ್ರತಿಯೊಂದು ಪಾತ್ರವು ಪ್ರೇಕ್ಷಕರನ್ನು ಹುರಿದುಂಬಿಸಿತು. ಮಹಿಳೆಯರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಫುಟ್ಬಾಲ್ ಆಡಿ, ಟ್ರೋಫಿ ಗೆಲ್ಲುವುದು ಚಿತ್ರದ ಕತೆ. ಈ ಸಿನಿಮಾದಲ್ಲಿ ತುಂಬಾ ಗಮನ ಸೆಳೆಯುವ ಪಾತ್ರಗಳಲ್ಲಿ ಪಾಂಡಿಯಮ್ಮನ ಪಾತ್ರವೂ ಒಂದು.
ತನ್ನ ದೈತ್ಯ ದೇಹದೊಂದಿಗೆ ಫುಟ್ ಬಾಲ್ ಆಡುವ ಪಾಂಡಿಯಮ್ಮ ಅಲ್ಲಲ್ಲಿ ಕಾಮಿಡಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ನಟ ವಿಜಯ್ ಅವರು ಪಾಂಡಿಯಮ್ಮಳನ್ನು ಕಿಚಾಯಿಸುವ ದೃಶ್ಯ ನೋಡುಗರಿಗೆ ಮಜಾ ನೀಡಿತ್ತು.
ಬಿಗಿಲ್ ಚಿತ್ರದಲ್ಲಿ ಪಾಂಡಿಯಮ್ಮಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈಕೆಯ ನಿಜವಾದ ಹೆಸರು ಇಂದ್ರಜಾ ಶಂಕರ್. ಈಕೆ ನಟ ರೋಬೋ ಶಂಕರ್ ಅವರು ಮಗಳು. ಬಿಗಿಲ್ ಮಾತ್ರವಲ್ಲದೇ ಅನೇಕ ಸಿನಿಮಾಗಳಲ್ಲಿ ಇಂದ್ರಜಾ ನಟಿಸಿದ್ದಾರೆ. ಆದರೆ, ಬಿಗಿಲ್ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ. ಮಾರ್ಚ್ 24ರಂದು ಇಂದ್ರಜಾ, ತನ್ನ ಸ್ನೇಹಿತ ಹಾಗೂ ನಿರ್ದೇಶಕ ಕಾರ್ತಿಕ್ ಎಂಬವರನ್ನು ಮದುವೆಯಾಗಿದ್ದಾರೆ.
ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧಿಕರು, ಸೆಲೆಬ್ರಿಟಿಗಳು ಹಾಗೂ ಆಪ್ತ ಬಳಗ ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದರು. ಇಂದ್ರಜಾ ಮತ್ತು ಕಾರ್ತಿಕ್ ನಡುವೆ 15 ವರ್ಷ ವಯಸ್ಸಿನ ಅಂತರವಿದೆ. ಇಂದ್ರಜಾ ಅವರು ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಂದಹಾಗೆ ಅಳಿಯ ಕಾರ್ತಿಕ್ಗೆ ರೋಬೋ ಶಂಕರ್ ಭಾರಿ ವರದಕ್ಷಿಣೆ ಸಹ ನೀಡಿದ್ದಾರೆ. ಮೂಲಗಳ ಪ್ರಕಾರ 20 ಲಕ್ಷ ರೂ. ಮೌಲ್ಯದ ಕಾರು ಮತ್ತು ಚಿನ್ನಾಭರಣಗಳನ್ನು ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಮಗಳ ಮದುವೆ ಖುಷಿಯಲ್ಲಿ ಮಾತನಾಡಿದ ರೋಬೋ ಶಂಕರ್, ನಾನು ಕಷ್ಟಪಟ್ಟು ಬೆಳೆದು ಈ ಸ್ಥಾನಕ್ಕೆ ಬಂದಿದ್ದೇನೆ. ನನ್ನ ಇಚ್ಛೆಯಂತೆ ಮಗಳ ಮದುವೆ ಮಾಡಿದ್ದೇನೆ ಎಂದಿದ್ದಾರೆ.
ಈ ಮಧ್ಯೆ ಪಾಂಡಿಯಮ್ಮಳ ವಿವಾಹ ಸಂಭ್ರಮದ ವಿಡಿಯೋ ವೈರಲ್ ಆಗಿ, ವಿವಾದಕ್ಕೆ ಗುರಿಯಾಗಿತ್ತು. ವಿಡಿಯೋ ನೋಡಿದ ಅನೇಕರು ಒಂದು ಕ್ಷಣ ಶಾಕ್ ಆದರು. ಮದುವೆ ಆರತಕ್ಷತೆಯ ದಿನ ಸೆರೆಹಿಡಿಯಲಾದ ವಿಡಿಯೋದಲ್ಲಿ ರೋಬೋ ಶಂಕರ್ ಪತ್ನಿ ಪ್ರಿಯಾಂಕಾ ಶಂಕರ್ ತಮ್ಮ ಅಳಿಯನ ತುಟಿಗೆ ಮುತ್ತು ನೀಡುತ್ತಾರೆ. ಅಳಿಯನ ಜತೆ ಡಾನ್ಸ್ ಮಾಡುವ ಪ್ರಿಯಾಂಕಾ ಶಂಕರ್, ಅಳಿಯನ ತುಟಿಗೆ ಚುಂಬಿಸುತ್ತಾರೆ. ವಿಡಿಯೋ ವೈರಲ್ ಆಗಿ, ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಯಾವ ಸಂಸ್ಕೃತಿಯಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವೈರಲ್ ವಿಡಿಯೋ ಬಗ್ಗೆ ಇಂದ್ರಜಾ ಪತಿ ಕಾರ್ತಿಕ್ ಮೌನ ಮುರಿದಿದ್ದಾರೆ. ಅತ್ತೆಗೆ ಮುತ್ತು ಕೊಟ್ಟ ವಿಚಾರದಲ್ಲಿ ಸಾಕಷ್ಟು ನೆಗಿಟಿವ್ ಕಾಮೆಂಟ್ಗಳು ಹರಿದಾಡಿವೆ. ಸಾರ್ವಜನಿಕವಾಗಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಕೆಲವರು ಸಲಹೆ ನೀಡಿದ್ದಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಮದುವೆ ಸಮಾರಂಭದಲ್ಲಿ ಹಾಡಿಗೆ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದೆವು. ಆಗ ನನ್ನ ಅತ್ತೆ ನನ್ನ ಕೆನ್ನೆಗೆ ಮುತ್ತಿಡಲು ಬಂದರು ನಾನು ಅದೇ ಸಮಯದಲ್ಲಿ ತಿರುಗಿದ್ದರಿಂದ ತುಟಿಗೆ ತುಟಿ ತಾಕಿತು. ಅನೇಕ ಜನರು ಇದರ ಸ್ಕ್ರೀನ್ಶಾಟ್ಗಳನ್ನು ನನಗೆ ಕಳುಹಿಸಿದಾಗಲೇ ಈ ವಿಚಾರ ನನಗೆ ಗೊತ್ತಾಯಿತು. ಆದರೆ, ಅದು ಯಾವಾಗ ಸಂಭವಿಸಿತು ಎಂದು ನನಗೆ ತಿಳಿದಿರಲಿಲ್ಲ. ಇದು ಗೊತ್ತಾದಾಗ ನಾವು ಕುಟುಂಬವಾಗಿ ಕುಳಿತು ಚರ್ಚಿಸಿದ್ದೇವೆ. ಇದು ಆಕಸ್ಮಿಕವಾಗಿ ಸಂಭವಿಸಿದೆ. ಆದರೆ ಕೆಲವರು ನೆಗಿಟಿವ್ ಆಗಿ ಮಾತನಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
ಇಂದ್ರಜಾ ಮತ್ತು ಕಾರ್ತಿಕ್ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಸ್ವತಃ ಇಂದ್ರಜಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತನ್ನ ತಂದೆ-ತಾಯಿಗಿಂತ ಕಾರ್ತಿಕ್ ಹೆಚ್ಚಾಗಿ ಬೆಂಬಲಿಸುವ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ಮೊದಲು ಪ್ರಪೋಸ್ ಮಾಡಿದ್ದೇ ನಾನು ನಾಲ್ಕು ತಿಂಗಳ ನಂತರ ಕಾರ್ತಿಕ್ ಪ್ರೀತಿಯನ್ನು ಒಪ್ಪಿಕೊಂಡ ಎಂದು ಹೇಳಿದ್ದಾರೆ. ಅಂದಹಾಗೆ ಇಂದ್ರಜಾಗೆ ಕೇವಲ 20 ವರ್ಷ ವಯಸ್ಸು. 2003ರ ಮೇ 17ರಂದು ಜನಿಸಿದರು. ಕೇವಲ 20 ವರ್ಷ ವಯಸ್ಸು ಎಂಬುದನ್ನು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.