ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತಡೇ ಖುಷಿಯಲ್ಲಿರೋ ನಿರ್ದೇಶಕನಿಗೆ ಪತ್ನಿ ಸೋನಲ್ ಶುಭ ಹಾರೈಸಿದ್ದಾರೆ. ಇನ್ಸ್ಟಾದಲ್ಲಿ ಇಬ್ಬರ ಫೋಟೋ ಹಂಚಿಕೊಳ್ಳುವ ಮೂಲಕ ‘ಐ ಲವ್ ಯೂ’ ಎಂದು ಬರೆದುಕೊಂಡಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಸಮುದ್ರ ಕಿನಾರೆ ಬಳಿ ನಿಂತು ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಜೊತೆಗೆ ಇಬ್ಬರು ಕಣ್ಣು ಕಣ್ಣು ನೋಡಿಕೊಂಡಿರುವ ಫೋಟೋ ಇದಾಗಿದೆ. ಪತಿಯ ಹುಟ್ಟುಹಬ್ಬದಂದು ಸೋನಲ್ ಈ ಫೋಟೋವನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ವಿಶ್ವದ ಅತ್ಯಂತ ಪ್ರೀತಿಯ, ಕಾಳಜಿಯುಳ್ಳ ಮತ್ತು ಕರುಣಾಳು ಹೃದಯದ ಪತಿಗೆ ಜನ್ಮದಿನದ ಶುಭಾಶಯಗಳು. ಪ್ರತಿದಿನ ನನ್ನನ್ನು ಪ್ರೇರೇಪಿಸುವ ನಿಮಗೆ ಹೆಚ್ಚು ಯಶಸ್ಸು ಸಿಗಲಿ ಮತ್ತು ಸಂತೋಷದಿಂದಿರಿ ಎಂದು ಬೇಡಿಕೊಳ್ಳುತ್ತೇನೆ. ಐ ಲವ್ ಯೂ’ ಎಂದು ಸೋನಲ್ ಮೋಂತೆರೋ ಬರೆದುಕೊಂಡಿದ್ದಾರೆ.