ಅಯೋಧ್ಯೆ ರಾಮ ಮಂದಿರಯಾದ ಬಳಿಕ ಇದೀಗ ಎಲ್ಲೆಡೆ ರಾಮ ನಾಮ ಶುರುವಾಗಿದೆ.. ಶ್ರೀರಾಮನಿಗಾಗಿ ಮಂದಿರ ನಿರ್ಮಾಣ ಮಾಡಿದ್ರೆ, ಹಲವು ಕಡೆ ರಾಮನಿಗಾಗಿ ಹಾಡುಗಳನ್ನು ರಚನೆ ಮಾಡಿದ್ದಾರೆ.. ಇದೀಗ ಇದೇ ಸಾಲಿಗೆ ಕರ್ನಾಟಕದ ಕಲಾದೇಗುಲ ಸ್ಟುಡಿಯೋ ಸೇರಿದೆ.
ಶ್ರೀರಾಮ ಎಂದ್ರೆ ಸಾಕು ಮೈಯೆಲ್ಲಾ ರೋಮಾಂಚನ ಆಗುವುದು ಇದೀಗ ಕಲಾದೇಗುಲ ಸ್ಟುಡಿಯೋ ಬಾಲರಾಮನಿಗಾಗಿ ವಿಶೇಷವಾಗಿ ಹಾಡುಗಳನ್ನು ರಚಿಸಿದ್ದಾರೆ.
ಇನ್ನೂ ಈ ಹಾಡುಗಳು ‘ಬಾಲ ರಾಮ ‘ ಎಂಬ ಟೈಟಲ್ನಲ್ಲೇ ನಿರ್ಮಾಣ ಮಾಡಲಾಗಿದೆ. ಕಲಾದೇಗುಲ ಸ್ಟುಡಿಯೋ ನಿರ್ಮಾಣ ಮಾಡಿರುವ ಈ ಹಾಡುಗಳು ಜಾತ್ಯಾತೀತ ಸಂದೇಶ ಸಾರುತ್ತದೆ.
ಕಲಾದೇಗುಲ ಶ್ರೀನಿವಾಸ್ ಸಂಗೀತ ರಚನೆ ಮಾಡಿದ್ದಾರೆ. ಈ ಹಾಡುಗಳಿಗೆ ಹಿನ್ನೆಲೆ ಗಾಯಕರಾಗಿ ಫಯಾಜ್ ಖಾನ್ ಹಾಡಿದ್ದಾರೆ, ಹಿನ್ನೆಲೆ ಸಂಗೀತ ದೀಪಕ್ ಅವರು ಮಾಡಿದ್ದಾರೆ. ಇನ್ನೂ ಈ ಹಾಡನ್ನು ಮಹೇಶ್ ಕುಮಾರ್ ಸಂಯೋಜಿಸಿದ್ದಾರೆ ಜಯಶೀಲನ್ ನೃತ್ಯ ಸಂಯೋಜಿಸಿದ್ದಾರೆ.
ಇನ್ನೂ ಈ ಹಾಡಿನ ಚಿತ್ರೀಕರಣವನ್ನು ವಿಶೇಷವಾಗಿ ಮಾಡಲಾಗಿದೆ. ಪರಿಕಲ್ಪನೆಯಲ್ಲಿ ಎಲ್ಲ ಸಮುದಾಯದವರು ಸೇರಿ ರಾಮನ ಮೂರ್ತಿಯನ್ನು ಮಣ್ಣಲ್ಲಿ ನಿರ್ಮಿಸುವ ದೃಶ್ಯ ಅತ್ಯಂತಮನೋಹರವಾಗಿದೆ