ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದ್ದು ಗುರುವಾರ (ಏ.4) ರಾಜ್ಯಸಭೆ ಸದಸ್ಯೆಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಯ್ಬರೇಲಿಯಿಂದ ಸಂಸದೆಯಾಗಿ ಆಯ್ಕೆಯಾಗುತ್ತಿದ್ದ ಅವರು ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ರಾಜಸ್ಥಾನದಿಂದ ಅವರು ಆಯ್ಕೆಯಾಗಿದ್ದಾರೆ.
ಗುರವಾರ ಸಂಸತ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಜಗದೀಪ್ ಧನಕರ್ )ಪ್ರಮಾಣ ವಚನ ಭೋದಿಸಿದರು. ಸೋನಿಯಾ ಗಾಂಧಿ ಜೊತೆಗೆ ಆರ್ಪಿಎನ್ ಸಿಂಗ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕರ್ನಾಟಕದ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್, ಸೈಯದ್ ನಾಸೀರ್ ಹುಸೇನ್, ಪಶ್ಚಿಮ ಬಂಗಾಳದ ಬಿಜೆಪಿ ಸದಸ್ಯ ಸಾಮಿಕ್ ಭಟ್ಟಾಚಾರ್ಯ, ವೈಎಸ್ಆರ್ಸಿಪಿ ನಾಯಕರಾದ ಗೋಲಾ ಬಾಬು ರಾವ್, ಮೇಧಾ ರಘುನಾಥ್ ರೆಡ್ಡಿ ಮತ್ತು ಯೆರುಂ ವೆಂಕಟ್ ಸುಬ್ಬಾ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು.
ಸೋನಿಯಾ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಶುಭ ಹಾರೈಸಿದ್ದಾರೆ. ಲೋಕಸಭೆಯಲ್ಲಿ 25 ವರ್ಷಗಳನ್ನು ಪೂರೈಸಿರುವ ಅವರು ಮತ್ತು ಈಗ ನನ್ನ ಸಹ ಸದಸ್ಯರಾಗಿದ್ದಾರೆ. ನಾವು ಮೇಲ್ಮನೆಯಲ್ಲಿ ಅವರ ಉಪಸ್ಥಿತಿಗಾಗಿ ಕಾಯುತ್ತಿದ್ದೇವೆ. ಮುಂದೆ ಅವರ ಅವಧಿ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಅಳಿಯ ರಾಬರ್ಟ್ ವಾದ್ರಾ ಶುಭ ಹಾರೈಸಿದರು.