ಭಾರತ ಮತ್ತು ದಕ್ಷಿಣ ಆಫ್ರಿಕಾ 12 ಅಂಕ ಪಡೆದರೂ ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದರೆ ಭಾರತ (Team India) ಎರಡನೇ ಸ್ಥಾನ ಪಡೆದಿದೆ. ಆದರೆ ಭಾರತ 6 ಪಂದ್ಯದಿಂದ 12 ಅಂಕ ಸಂಪಾದಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಈ ಎರಡು ತಂಡಗಳು ಸೆಮಿಫೈನಲ್ ಪ್ರವೇಶದ ಬಾಗಿಲಿನ ಹತ್ತಿರ ಬಂದಿದೆ.
ನ್ಯೂಜಿಲೆಂಡ್ ಈ ಪಂದ್ಯವನ್ನು ಸೋತ ಕಾರಣ ಪಾಕಿಸ್ತಾನಕ್ಕೆ (Pakistan) ಸೆಮಿ ಪ್ರವೇಶಿಸುವ ಅವಕಾಶ ಈಗ ಸೃಷ್ಟಿಯಾಗಿದೆ. ಸದ್ಯ ಪಾಕಿಸ್ತಾನ 7 ಪಂದ್ಯವಾಡಿ 3ರಲ್ಲಿ ಜಯ ಸಾಧಿಸುವ ಮೂಲಕ 6 ಅಂಕ ಪಡೆದು 5ನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ 7 ಪಂದ್ಯವಾಡಿ 4 ಜಯ ಸಾಧಿಸುವ ಮೂಲಕ 8 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ಮುಂದಿನ ಎರಡು ಪಂದ್ಯವನ್ನು ನ್ಯೂಜಿಲೆಂಡ್ ಸೋತು ತನ್ನ ಎರಡು ಪಂದ್ಯವನ್ನು ಗೆದ್ದರೆ 10 ಅಂಕ ಸಂಪಾದಿಸುವ ಮೂಲಕ ಪಾಕ್ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನೊಂದು ಕಡೆಯಲ್ಲಿ ಆಸ್ಟ್ರೇಲಿಯಾ 6 ಪಂದ್ಯಗಳಿಂದ 8 ಅಂಕ ಸಂಪಾದಿಸಿದರೆ ಬಾಂಗ್ಲಾದೇಶ 6 ಪಂದ್ಯಗಳಿಂದ 6 ಅಂಕ ಸಂಪಾದಿಸಿದೆ. ಈ ಎರಡು ತಂಡಗಳು 3 ಪಂದ್ಯ ಗೆದ್ದರೆ ಅಥವಾ 2 ಪಂದ್ಯ ಗೆದ್ದು ಉತ್ತಮ ರನ್ ರೇಟ್ ಹೊಂದಿದ್ದರೆ ಪಾಕಿಸ್ತಾನದ ಸೆಮಿ ಬಾಗಿಲು ಬಂದ್ ಆಗಲಿದೆ. ಹೀಗಾಗಿ ಬೇರೆ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ ನಿಂತಿದೆ.