ಸೌತ್ ಸುಂದರಿ ನಟಿ ಸಮಂತಾ ರುತ್ ಪ್ರಭು ಸದ್ಯ ಪ್ಯಾನ್ ಇಂಡಿಯಾ ನಟಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ನಲ್ಲಿ ನಟಿಸಿದ ನಂತರ ಸಮಂತಾ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಸಮಂತ ಲಂಡನ್ಗೆ ಭೇಟಿ ನೀಡಿದ್ದು ಅವುಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಡಾರ್ಕ್ ಬ್ಲೂ ಆಫ್ ಶೋಲ್ಡರ್ ಗೌನ್ ಧರಿಸಿದ್ದ ಸಮಂತ ಇದಕ್ಕೆ ಸಿಲ್ವರ್ ನೆಕ್ಲೆಸ್ ಧರಿಸಿದ್ದರು. ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದ ಸಮಂತಾ ತುಂಬಾ ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದಾರೆ. ನಟಿ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಸಮಂತ ತಮ್ಮ ವೆಬ್ ಸರಣಿಯ ಪ್ರೀಮಿಯರ್ ನಲ್ಲಿ ಭಾಗಿಯಾಗಲು ಲಂಡನ್ ಗೆ ತೆರಳಿದ್ದರು.ಈ ವೇಳೆ ನಟಿ ಧರಿಸಿದ್ದ ದುಭಾರಿ ವಸ್ತ್ರ ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರತಿಯೊಬ್ಬರ ಮನ ಸೆಳೆದಿತ್ತು.
ಸಮಂತಾ ಧರಿಸಿದ್ದ ವಸ್ತ್ರವನ್ನು ಖ್ಯಾತ ವಿನ್ಯಾಸಕಿ ಡಿಸೈನ್ ಮಾಡಿದ್ದಾರೆ. ಅಂದ ಹಾಗೆ ಈಕೆ ಧರಿಸಿದ್ದು ಟಸ್ಸೆಲ್ ಪ್ಯಾಂಡ್ ಹಾಗೂ ಟಾಪ್.
ನಟಿ ಧರಿಸಿದ್ದು ಗೌನ್ನಂತೆ ಕಂಡರೂ ಇದು ಗೌನ್ ಅಲ್ವಂತೆ. ಬದಲಾಗಿ ಇದು ಬ್ಲೌಸ್ ಹಾಗೂ ಪ್ಯಾಂಟ್ ಎಂದು ಹೇಳಲಾಗಿದೆ. ಬಾಟಮ್ಗೆ ನಟಿ ಕ್ರಿಸ್ಟಲ್ ಬೀಡ್ಸ್ ಇದ್ದಂತಹ ಪ್ಯಾಂಟ್ ಧರಿಸಿದ್ದರೆ ಬ್ಲೌಸ್ ಆಫ್ ಶೋಲ್ಡರ್ ಆಗಿದ್ದು ಪ್ಲೆನ್ ಆಗಿತ್ತು.
ಸಮಂತಾ ಧರಿಸಿದ್ದ ಈ ವಸ್ತ್ರದ ಬೆಲೆ ಬರೋಬ್ಬರಿ 3 ಲಕ್ಷ ರೂಪಾಯಿಗಳು. ಸಮಂತಾ ಸಿಟಾಡೆಲ್ ಹನಿ ಬನಿಯಾಗಿ ಲಂಡನ್ ಗೆ ತೆರಳಿದ್ದರು.
ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಸಿಟೆಡಾಲ್ ಸ್ಪೆಷಲ್ ಸ್ಕ್ರೀನಿಂಗ್ನಲ್ಲಿ ಭಾಗಿಯಾದರು. ನಟಿ ಪ್ರಿಯಾಂಕಾ ಚೋಪ್ರಾ ಕೂಡಾ ಇದರಲ್ಲಿ ಭಾಗಿಯಾಗಿದ್ದರು. ನಟಿ ಬ್ರೈಟ್ ರೆಡ್ ಗೌನ್ ಧರಿಸಿದ್ದರು. ಈ ಕೆಲವು ಫೋಟೋಸ್ ಸದ್ಯ ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿವೆ.