ರಾಗಿಗುಡ್ಡದಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆ ಇಂದು ಲೋಕಾರ್ಪಣೆಗೊಂಡಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 449 ಕೋಟಿ ರೂ.
ವೆಚ್ಚದಲ್ಲಿ ನಿರ್ಮಾಣಗೊಂಡ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಅನ್ನು ಲೋಕಾರ್ಪಣೆ ಮಾಡಿದರು.
ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ವರೆಗೆ ನಿರ್ಮಾಣವಾಗಿರುವ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್ಸು, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ. ಎರಡನೇ ಹಂತದ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ಮೆಟ್ರೋ ಕಂಬಕ್ಕೆ ಎರಡೂ ಬದಿಯಲ್ಲಿ ರೆಕ್ಕೆಗಳ ರೀತಿಯಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ
ಡಬ್ಬಲ್ ಡೆಕ್ಕರ್ ರೋಡ್ ವಿಶೇಷತೆ :
* ದಕ್ಷಿಣ ಭಾರತದ ಮೊದಲ ಡಬ್ಬಲ್ ಡೆಕ್ಕರ್ ರಸ್ತೆ ಎಂಬ ಹೆಗ್ಗಳಿಕೆ
* ರಾಗಿಗುಡ್ಡದಿಂದ ಸಿಕ್ಕ ಬೋರ್ಡ್ ಗೆ ಹೋಗುವವರಿಗೆ ಹೆಚ್ಚು ಅನುಕೂಲ
* 3.3 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ಇದು
* ಬರೋಬ್ಬರಿ 449 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಡಬಲ್ ಡೆಕ್ಕರ್ ಮೆಲ್ಸೇತುವೆ
* ನೆಲಮಟ್ಟದ ರಸ್ತೆಯಿಂದ 8 ಮೀಟರ್ ಎತ್ತರದಲ್ಲಿ ಮೆಲ್ಸೇತುವೆ ನಿರ್ಮಾಣ
* 16 ಮೀಟರ್ ಮೆಟ್ರೋ ಹಳದಿ ಮಾರ್ಗದ ಎತ್ತರ
* ಈ ಮಾರ್ಗದಲ್ಲಿ ಪ್ರತಿನಿತ್ಯ 50 ಸಾವಿರಕ್ಕೂ ಹೆಚ್ಚು ವಾಹನಗಳ ಓಡಾಟ
* ಈ ಮೊದಲು ಇಲ್ಲಿಂದ ಸಿಲ್ಕ್ ಬೋರ್ಡ್ ತಲುಪಲು 30 ರಿಂದ 40 ನಿಮಿಷ ಸಮಯ ಬೇಕಾಗಿತ್ತು
* ಈ ಫ್ಲೈ ಓವರ್ ನಿಂದ 5 ರಿಂದ 6 ನಿಮಿಷದಲ್ಲಿ ಕ್ರಮಿಸಬಹುದು
ಜನರಿಗೆ ಏನು ಲಾಭ
-ರಾಗಿಗುಡ್ಡ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆಯನ್ನು ನಿವಾರಣೆ
-ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರ
-ರಾಗಿಗುಡ್ಡದಿಂದ ಪ್ರಯಾಣಿಸುವವರು ಇನ್ನು ಮುಂದೆ ಸಿಗ್ನಲ್ ಇಲ್ಲದೆ ಪ್ರಯಾಣ
-ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಆರಾಮಾಗಿ ಪ್ರಯಾಣಿಸಬಹುದು