ದಕ್ಷಿಣ ಕೊರಿಯಾ: ಮಹಿಳೆಯೊಬ್ಬಳು ತಾನು ಹೆತ್ತ ಮಕ್ಕಳನ್ನು ಕೊಂದು ಬಳಿಕ ಶವವನ್ನು ವರ್ಷಗಳ ಕಾಲ ಫ್ರೀಜರ್ ನಲ್ಲಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳು ಹಿಟ್ಟಿದ ಬಳಿಕ ಅವುಗಳನ್ನು ಕೊಂದು ಪ್ರೀಜರ್ ನಲ್ಲಿ ಇರಿಸುತ್ತಿದಿದ್ದಾಗಿ 30 ವರ್ಷದ ಮಹಿಳೆ ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾಳೆ.
ಆರೋಪಿ ಮಹಿಳೆಗೆ ಈಗಾಗಲೇ 12, 10 ಹಾಗೂ 8 ವರ್ಷದ ಮಕ್ಕಳಿದ್ದಾರೆ. ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಮಹಿಳೆಗೆ ಮತ್ತಿಬ್ಬರು ಮಹಿಳೆ ಹುಟ್ಟಿದ್ದಾರೆ. ಹೀಗಾಗಿ ಇವರನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಅವರನ್ನು ಹತ್ಯೆ ಮಾಡಿ ಪ್ರಿಡ್ಜ್ ನಲ್ಲಿ ಇರಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಮಹಿಳೆಯು ನವೆಂಬರ್ 2018ರಲ್ಲಿ ನಾಲ್ಕನೇ ಮಗುವನ್ನು ಹತ್ಯೆ ಮಾಡಿದ್ದಳು. ಹೆರಿಗೆಯಾದ ಮರುದಿನ ಹೆಣ್ಣು ಮಗುವನ್ನು ಕತ್ತು ಹಿಸುಕಿ ಮಗುವಿನ ಶವವನ್ನು ತನ್ನ ಮನೆಯ ಫ್ರೀಜರ್ನಲ್ಲಿರಿಸಿದ್ದಳು. 2019ರಲ್ಲಿ ಜನಿಸಿದ ತನ್ನ ಐದನೇ ಮಗುವಿಗೆ ಅದೇ ರೀತಿ ಮಾಡಿದ್ದಾಳೆ ಎನ್ನಲಾಗಿದೆ.
ಗರ್ಭಪಾತ ಮಾಡಲಾಗಿದೆ ಎಂದು ಆಕೆಯ ಪತಿ ಎಲ್ಲರಿಗೂ ಹೇಳಿದ್ದ, ಆದರೆ ಮೇ ತಿಂಗಳಲ್ಲಿ ಶಿಶುಗಳ ಜನನದ ಗಣತಿ ನಡೆಸಿದಾಗ ಆಸ್ಪತ್ರೆಯಲ್ಲಿ ಮಗು ಹುಟ್ಟಿದೆ ಆದರೆ ಸಾವನ್ನಪ್ಪಿರುವುದು ಹೇಗೆ ಎನ್ನುವ ವಿಚಾರ ಕುರಿತು ತನಿಖೆ ಆರಂಭವಾಯಿತು. ಆಗ ಮಹಿಳೆಯ ಮನೆಯಲ್ಲಿ ತಪಾಸಣೆ ನಡೆಸಿದಾಗ ಶಿಶುಗಳ ಶವ ಪತ್ತೆಯಾಗಿದೆ. ಮಹಿಳೆ ಮನೆಯಲ್ಲಿ ಒಂದು ಮಗುವನ್ನು ಮತ್ತು ಆಸ್ಪತ್ರೆಯ ಬಳಿ ಮತ್ತೊಂದು ಮಗುವನ್ನು ಕೊಂದಿರುವುದು ಬೆಳಕಿಗೆ ಬಂದಿದೆ.